ಜಗತ್ತಿನ ಸುರಕ್ಷಿತ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 66ನೇ ಸ್ಥಾನ

ಜಗತ್ತಿನ 147 ದೇಶಗಳ ಸುರಕ್ಷಿತ ದೇಶಗಳ ಸೂಚ್ಯಂಕ (2025) ಪ್ರಕಟ
ಸೂಚ್ಯಂಕದ ಪ್ರಕಾರ 147 ದೇಶಗಳ ಪಟ್ಟಿಯಲ್ಲಿ 66ನೇ ಸ್ಥಾನ ಪಡೆದಿದೆ
ಯುರೋಪಿನ ಪುಟ್ಟ ದೇಶವಾದ ಅಂಡೋರ ಪ್ರಥಮ ಸ್ಥಾನದಲ್ಲಿದೆ
ಪಟ್ಟಿಯಲ್ಲಿ ಭಾರತದ ನೆರೆ ರಾಷ್ಟ್ರಗಳಾದ ಪಾಕಿಸ್ತಾನ (65), ಶ್ರೀಲಂಕಾ (59) ಮತ್ತು ಬಾಂಗ್ಲಾದೇಶ 126ನೇ ಸ್ಥಾನಗಳನ್ನು ಪಡೆದಿವೆ
ಬ್ರಿಟನ್ ದೇಶ 87ನೇ ಸ್ಥಾನ ಮತ್ತು ಅಮೆರಿಕಾ 89ನೇ ಸ್ಥಾನದಲ್ಲಿವೆ
ಅಂಡೋರ, ಯುಎಇ, ಖತರ್, ತೈವಾನ್, ಮತ್ತು ಒಮಾನ್ ಕ್ರಮವಾಗಿ ಮೊದಲ ಐದು ಸ್ಥಾನಗಳನ್ನು ಪಡೆದಿವೆ.
ದ.ಆಫ್ರಿಕಾ, ಅಫ್ಘಾನಿಸ್ತಾನ್, ಹೈಟಿ, ಪಪುವಾ ನ್ಯೂಗಿನಿಯಾ, ಮತ್ತು ವೆನೆಝುಲಾ ಕೊನೆಯ ಐದು ಸ್ಥಾನಗಳಲ್ಲಿ ಉಳಿದುಕೊಂಡಿವೆ.