ಅತೀ ಭಾರದ ಉಪಗ್ರಹ ಉಡಾಯಿಸಿದ ಇಸ್ರೋ!

4410 ಕೆ.ಜಿ ಭಾರದ CMS-03 ಉಪಗ್ರಹವನ್ನು ಅಂತರೀಕ್ಷಕ್ಕೆ ಹೊತ್ತೊಯ್ದ 'ಬಾಹುಬಲಿ'
ಈ ಉಪಗ್ರಹವು ಭಾರತದ ನೆಲದಿಂದ ಹಾರಿಸಲಾದ ಅತೀ ಭಾರದ ಉಪಗ್ರಹ ಆಗಿದೆ.
'ಬಾಹುಬಲಿ' ಸ್ವದೇಶಿ ನಿರ್ಮಿತ ರಾಕೆಟ್ ಮೂಲಕ ಈ ಭಾರದ ಉಪಗ್ರಹ ಉಡಾಯಿಸಿದ್ದು ಇಸ್ರೋದ ಇನ್ನೊಂದು ಮೈಲಿಗಲ್ಲು
ಈ ಉಪಗ್ರಹ ದುರ್ಗಮ ಪ್ರದೇಶಗಳಲ್ಲಿ ಇಂಟರ್ನೆಟ್ ಹಾಗು ನೇರ ಪ್ರಸಾರ ಸೇವೆಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಉಪಗ್ರಹದ ಉಡಾವಣೆಯ ಸಮಗ್ರ ಕಾರ್ಯಾಚರಣೆ ಯೋಜಿತ ರೀತಿಯಲ್ಲೇ ನಡೆದಿದೆ.
ಇದು ಇಸ್ರೋದ ತಾಂತ್ರಿಕ ನಿಖರತೆಗೆ ಸಾಕ್ಷಿಯಾಗಿದೆ.
ಈ ಉಪಗ್ರಹದ ಉಡಾವಣೆಯು ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಭಾರತದ ಸಾಮರ್ಥ್ಯವನ್ನು ಎತ್ತಿ ಹಿಡಿದಿದೆ.