ಇಸ್ರೋದ ಸರ್ವ ಬಾಲಕಿಯರ ಮೂನ್ ಮಿಷನ್ ಮುಂದಿನ ವರ್ಷ ಉಡಾವಣೆ

ವಿಶ್ವದ 108 ದೇಶಗಳ 1200ಕ್ಕೂ ಹೆಚ್ಚು ಮಂದಿ ಪ್ರತಿಭಾವಂತ ಬಾಲಕಿಯರನ್ನು ಒಳಗೊಂಡ ಇಸ್ರೋದ ಯೋಜನೆ
ಇಸ್ರೋದ ಸರ್ವ ಬಾಲಕಿಯರ ಮೂನ್ ಮಿಷನ್ ಶಕ್ತಿಸ್ಯಾಟ್ ಅನ್ನು ಮುಂದಿನ ವರ್ಷದ ಉಡಾಯಿಸಲು ಉದ್ದೇಶಿಸಲಾಗಿದೆ
2026ರ ಸೆಪ್ಟೆಂಬರ್ ನಲ್ಲಿ ಇಸ್ರೋದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ನಿಂದ ಉಡಾವಣೆ
ಈ ಮಿಷನ್ ಅಭಿವೃದ್ಧಿಯಲ್ಲಿ ಬೋಟ್ಸ್ವಾನಾ, ಗ್ರೀಸ್, ಕೋಸ್ಟರಿಕ, ಯುಎಇ ಹಾಗೂ ಕ್ಯಾಮರೂನ್ ಸೇರಿದಂತೆ ಹಲವು ದೇಶಗಳ ಬಾಲಕಿಯರು ಇದ್ದಾರೆ.
"ಚಂದ್ರಯಾನ ಮಿಷನ್ ಅಧಿಕೃತವಾಗಿ ಜನವರಿ 16 ಅಥವಾ 22ರಂದು ಘೋಷಣೆಯಾಗಲಿದೆ" ಎಂದ ಶಕ್ತಿಸ್ಯಾಟ್ ನಿರ್ದೇಶಕಿ ಶ್ರೀಮತಿ ಕೇಸನ್
ಬಾಹ್ಯಾಕಾಶ ವಲಯದ ಉದ್ಯೋಗದಲ್ಲಿ ಕೇವಲ ಶೇಕಡ 20ರಷ್ಟು ಪಾಲು ಹೊಂದಿರುವ ಮಹಿಳೆಯರು
ಈ ಅಂತರವನ್ನು ಕಡಿಮೆ ಮಾಡುವುದು ಮಾತ್ರವಲ್ಲದೇ ಪ್ರತಿಭೆಗಳನ್ನು ವಿಶ್ವಕ್ಕೆ ಅನಾವರಣಗೊಳಿಸುವ ಯೋಜನೆ ಇದಾಗಿದೆ ಎಂದು ಕೇಸನ್ ಬಣ್ಣಿಸಿದ್ದಾರೆ