ಬೆಲ್ಜಿಯಂನಲ್ಲಿ ಮೆಹುಲ್ ಚೋಕ್ಸಿ ಬಂಧನ

ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಲ ಪ್ರಕರಣದ ಪ್ರಮುಖ ಆರೋಪಿ
ಭಾರತದ ಗಡೀಪಾರು ಮನವಿಯ ಮೇರೆಗೆ ಬೆಲ್ಜಿಯಂನಲ್ಲಿ ಬಂಧನ
ಮುಂಬೈ ನ್ಯಾಯಾಲಯ ಚೋಕ್ಸಿ ವಿರುದ್ಧ ಹೊರಡಿಸಿದ ಎರಡು ಮುಕ್ತ ಬಂಧನ ವಾರೆಂಟ್‍ಗಳನ್ನು ಉಲ್ಲೇಖಿಸಿ ಆರೋಪಿಯ ಬಂಧನ
ಆ್ಯಂಟ್ರಪ್‍ನಲ್ಲಿ ಪತ್ನಿ ಪ್ರೀತಿ ಚೋಕ್ಸಿ ಜತೆ ವಾಸವಿದ್ದ ಆರೋಪಿ
ಅಂಟಿಗುವಾ ಮತ್ತು ಬರ್ಬುಡಾ ಪ್ರಜೆಯಾಗಿರುವ ಈತ ವೈದ್ಯಕೀಯ ಚಿಕಿತ್ಸೆಗಾಗಿ ದ್ವೀಪರಾಷ್ಟ್ರ ತೊರೆದಿದ್ದ
ಈತನ ಅಳಿಯ ಹಾಗೂ ಸಹ ಆರೋಪಿ ನೀರವ್ ಮೋದಿ ಲಂಡನ್‍ನಿಂದ ಗಡೀಪಾರುಗೊಳ್ಳಬೇಕಿದೆ