ವಿಶ್ವಾದ್ಯಂತ ಒಂದು ಶತಕೋಟಿಗೂ ಹೆಚ್ಚು ಜನರು ಮಾನಸಿಕ ಆರೋಗ್ಯ ಸ್ಥಿತಿಗಳೊಂದಿಗೆ ಬದುಕುತ್ತಿದ್ದಾರೆ
ದತ್ತಾಂಶ ಬಿಡುಗಡೆ ಮಾಡಿದ ವಿಶ್ವ ಆರೋಗ್ಯ ಸಂಸ್ಥೆ
ಒಂದು ಶತಕೋಟಿಗೂ ಅಧಿಕ ಜನರು ಮಾನಸಿಕ ಆರೋಗ್ಯ ಸ್ಥಿತಿಗಳೊಂದಿಗೆ ಬದುಕುತ್ತಿದ್ದು, ಆತಂಕ ಮತ್ತು ಖಿನ್ನತೆ ಹೆಚ್ಚು ಸಾಮಾನ್ಯವಾಗಿವೆ ಎಂದ ವರದಿ
ಮಾನಸಿಕ ಆರೋಗ್ಯ ಸ್ಥಿತಿಗಳು ಎಲ್ಲ ವಯೋಮಾನಗಳ, ಆದಾಯ ಮಟ್ಟಗಳ ಮತ್ತು ಪ್ರದೇಶಗಳ ಜನರ ಮೇಲೆ ಪರಿಣಾಮ ಬೀರುತ್ತಿವೆ
ಮಾನಸಿಕ ಆರೋಗ್ಯ ಸ್ಥಿತಿಗಳು ಮಹಿಳೆಯರಲ್ಲಿ ಹೆಚ್ಚಾಗಿವೆ.
51.39 ಕೋಟಿ ಪುರುಷರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಮಹಿಳೆಯರ ಸಂಖ್ಯೆ 58.15 ಕೋಟಿ ಆಗಿದೆ
ಸಂಗಾತಿಯಿಂದ ಹಿಂಸೆ ಅಥವಾ ಲೈಂಗಿಕ ಹಿಂಸೆಯನ್ನು ಅನುಭವಿಸಿರುವ ಮಹಿಳೆಯರಲ್ಲಿ ಮಾನಸಿಕ ಅಸ್ವಸ್ಥತೆ ಸಾಧ್ಯತೆ ಹೆಚ್ಚು
ಇನ್ನೊಂದು ವರದಿ ಮೆಂಟಲ್ ಹೆಲ್ತ್ ಅಟ್ಲಾಸ್ 2024 ಸರಕಾರದ ಮಾನಸಿಕ ಆರೋಗ್ಯ ನೀತಿಗಳನ್ನು ವಿಶ್ಲೇಷಿಸುತ್ತದೆ
ಮಹಿಳೆಯರಲ್ಲಿ ಆತಂಕ ಮತ್ತು ಖಿನ್ನತೆ ಹೆಚ್ಚು ಸಾಮಾನ್ಯವಾಗಿವೆ ಎಂದ ವರದಿ
ಪುರುಷರು ಗಮನ-ಕೊರತೆ/ಹೈಪರ್‌ಆ್ಯಕ್ಟಿವಿಟಿ ಡಿಸಾರ್ಡರ್(ಎಡಿಎಚ್‌ಡಿ),ಸ್ವಲೀನತೆ ಅಥವಾ ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್(ಎಎಸ್‌ಡಿ) ಮತ್ತು ನಡವಳಿಕೆಯ ಅಸ್ವಸ್ಥತೆಗಳಿಂದ ಬಳಲುವ ಸಾಧ್ಯತೆ ಹೆಚ್ಚು
2021ರಲ್ಲಿ 7.2 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಂದಾಜಿಸಿರುವ ವರದಿ
ಇದು ಯುವಜನರಲ್ಲಿ ಸಾವುಗಳಿಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದೆ
ಇದು ಯುವಜನರಲ್ಲಿ ಸಾವುಗಳಿಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದೆ
ಆತಂಕ ಮತ್ತು ಖಿನ್ನತೆಯೊಂದೇ ಜಾಗತಿಕ ಆರ್ಥಿಕತೆಗೆ ವಾರ್ಷಿಕ ಒಂದು ಲಕ್ಷ ಕೋಟಿ ಡಾಲರ್ ಗಳ ನಷ್ಟವನ್ನುಂಟು ಮಾಡುತ್ತಿದೆ