47ನೇ ವಯಸ್ಸಿನಲ್ಲಿ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ ನಾಲ್ಕು ಮಕ್ಕಳ ತಾಯಿ

ದಂತ ವೈದ್ಯಕೀಯ ಕೋರ್ಸ್‌ಗೆ ಸೇರ್ಪಡೆಯಾದ ಕಾಸರಗೋಡಿನ ಜುವಾನಾ ಅಬ್ದುಲ್ಲಾ
ವಿವಾಹವಾದ 25 ವರ್ಷಗಳ ಬಳಿಕ ಮತ್ತೆ ವಿದ್ಯಾಭ್ಯಾಸ ಮುಂದುವರಿಸಲು ತೀರ್ಮಾನಿಸಿದ ಜುವಾನಾ ಅಬ್ದುಲ್ಲಾ
NEET ಪರೀಕ್ಷೆಯ ಮೊದಲ ಪ್ರಯತ್ನದಲ್ಲೇ ಉತ್ತೀರ್ಣ
ಬ್ಯಾಚ್ಯುಲರ್‌ ಆಫ್ ಡೆಂಟಲ್ ಸರ್ಜರಿ (ಬಿಡಿಎಸ್) ಕೋರ್ಸ್‌ಗೆ ಸೇರಿದ ಜುವಾನಾ
ಜುವಾನಾ ಅವರ ಪತಿ ಕೆ ಪಿ ಅಬ್ದುಲ್ಲಾ ಇಎನ್‌ಟಿ ತಜ್ಞರಾಗಿದ್ದು, ಹಿರಿಯ ಪುತ್ರಿ ಮರಿಯಮ್ ಆಫ್ರಿನ್ ಅಬ್ದುಲ್ಲಾ ಎಂಬಿಬಿಎಸ್ ಪೂರ್ಣಗೊಳಿಸಿದ್ದಾರೆ.
ಪುತ್ರರಾದ ಸಾಲಿಹ್ ಅಬ್ದುರ್ರಜಾಕ್ ಮತ್ತು ಸಲ್ಮಾನ್ ಅಬ್ದುಲ್ ಖಾದಿರ್ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದಾರೆ
ಅವರು ಯಾವುದೇ ಕೋಚಿಂಗ್ ಕ್ಲಾಸ್ ಸೇರದೆ ಯೂಟ್ಯೂಬ್ ಮತ್ತು ಮಕ್ಕಳ ಸಹಾಯದಿಂದ ಓದಿದ್ದಾರೆ