ಕಕ್ಷೆ ಸೇರಿದ 'ನಿಸಾರ್' ಉಪಗ್ರಹ!

ಬುಧವಾರ ಯಶಸ್ವಿಯಾಗಿ ಕಕ್ಷೆ ಸೇರಿದ 'NISAR' - (ನಾಸಾ-ಇಸ್ರೋ ಸಿಂಥೆಟಿಕ್ ರಾಡಾರ್ ಸೆಟಲೈಟ್)
ಇದು ಜಗತ್ತಿನ ಅತ್ಯಂತ ದುಬಾರಿ ನಾಗರಿಕ ಉದ್ದೇಶದ ಭೂವೀಕ್ಷಣೆ ಉಪಗ್ರಹವಾಗಿದೆ
ಆಂಧ್ರಪ್ರದೇಶದ ಶ್ರೀಹರಿಕೋಟದ ಬಾಹ್ಯಾಕಾಶ ಕೇಂದ್ರದಿಂದ ಆಕಾಶಕ್ಕೆ ನೆಗೆದ 'ನಿಸಾರ್'
'ನಿಸಾರ್' ಎರಡು ಬಾಹ್ಯಾಕಾಶ ಸಂಸ್ಥೆಗಳ ನಡುವಿನ ಮೊದಲ ಸಹಯೋಗದ ಯೋಜನೆಯಾಗಿದೆ.
ಈ ಉಪಗ್ರಹ ನೈಸರ್ಗಿಕ ಸಂಪನ್ಮೂಲಗಳ ಕುರಿತು ನಿಗಾ ವಹಿಸಲು, ಭೂಕುಸಿತ ಪತ್ತೆ, ಹವಾಮಾನ ಬದಲಾವಣೆ ಮತ್ತು ವಿಪತ್ತು ನಿರ್ವಹಣೆಗೆ ನೆರವಾಗಲಿದೆ