ಆದಾಯ ತೆರಿಗೆ ವಿವರ ಸಲ್ಲಿಕೆಗೆ ಗಡುವು ವಿಸ್ತರಣೆ ಇಲ್ಲ

ಸ್ಪಷ್ಟಪಡಿಸಿದ ಆದಾಯ ತೆರಿಗೆ ಇಲಾಖೆ
ಆದಾಯ ತೆರಿಗೆ ವಿವರ ಸಲ್ಲಿಸಲು ಇಂದು (ಸೆ.15) ಕಡೆಯ ದಿನ
ಪೋರ್ಟಲ್‌ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಎಂದು ಹಲವರಿಂದ ದೂರು
ಸದ್ಯ ಪೋರ್ಟಲ್‌ ಸರಿಯಾಗಿಯೇ ಕೆಲಸ ಮಾಡುತ್ತಿದೆ ಎಂದು ಪ್ರತಿಕ್ರಿಯಿಸಿರುವ ಇಲಾಖೆ
ಐ.ಟಿ ವಿವರ ಸಲ್ಲಿಸುವ ದಿನಾಂಕ ವಿಸ್ತರಣೆ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ ಎಂದ ತೆರಿಗೆ ಇಲಾಖೆ
ಸುಳ್ಳು ಸುದ್ದಿಗಳನ್ನು ನಂಬದಿರಿ ಎಂದು ಜನರಿಗೆ ಎಚ್ಚರಿಕೆ
ಮಾಹಿತಿಗಾಗಿ ಸಹಾಯವಾಣಿ ದಿನದ 24 ಗಂಟೆಯವರೆಗೂ ಕಾರ್ಯನಿರ್ವಹಿಸುತ್ತದೆ ಎಂದ ಇಲಾಖೆ