ನಮ್ಮ ಪ್ರತಿದಿನದ ತಿನಸುಗಳು ಇನ್ನು 'ಅಪಾಯಕಾರಿ' ಎಂಬ ಎಚ್ಚರಿಕೆಯೊಂದಿಗೆ ಬರಲಿವೆ!

ನಮ್ಮ ದೈನಂದಿನ ತಿಂಡಿ ತಿನಸುಗಳಲ್ಲಿ ಜಿಡ್ಡು ಮತ್ತು ಸಕ್ಕರೆ ಅಂಶಗಳು ಇರುತ್ತವೆ.
ಹಾಗಾಗಿ, ಜಿಲೇಬಿ, ಸಮೋಸಾ, ಬಿಸ್ಕತ್, ಚಹಾ... ಇನ್ನು 'ಅಪಾಯಕಾರಿ' ಎಂಬ ಎಚ್ಚರಿಕೆಯ ಫಲಕಗಳೊಂದಿಗೆ ಬರಲಿವೆ.
ಈ ಕುರಿತು ಎಐಐಎಂಎಸ್ ಮತ್ತು ಇತರ ಕೇಂದ್ರೀಯ ಸಂಸ್ಥೆಗಳು 'ಎಚ್ಚರಿಕೆ'ಯ ಫಲಕಗಳನ್ನು ಅಳವಡಿಸುವಂತೆ ಆರೋಗ್ಯ ಸಚಿವಾಲಯಕ್ಕೆ ಸೂಚಿಸಿದೆ.
ಜಂಕ್ ಫುಡ್ ಉತ್ಪನ್ನಗಳನ್ನು ತಂಬಾಕಿನ ಸಾಲಿಗೆ ಸೇರಿಸುವ ನಿಟ್ಟಿನಲ್ಲಿ ಇದು ಮೊದಲ ನಡೆಯಾಗಿದೆ.
ಸರ್ಕಾರಿ ಸಂಸ್ಥೆಗಳಲ್ಲಿ ಅಳವಡಿಕೆಯಾಗಲಿರುವ ಈ ಫಲಕಗಳು ಸಾಂಪ್ರದಾಯಿಕ ತಿಂಡಿಗಳಲ್ಲಿರುವ ಸಕ್ಕರೆ ಮತ್ತು ಜಿಡ್ಡಿನ ಅಂಶದ ಕುರಿತು ಎಚ್ಚರಿಸಲಿವೆ.
ಲಡ್ಡು, ವಡಾ-ಪಾವ್, ಪಕೋಡಾದಂಥ ಇತರ ತಿನಸುಗಳ ಮೇಲೆಯೂ ನಿಗಾ ವಹಿಸಲಾಗುತ್ತಿದೆ.
ಈ ನಿರ್ದೇಶನವನ್ನು ಎಐಐಎಂಎಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.
ಈ ಎಚ್ಚರಿಕೆ ಫಲಕಗಳನ್ನು ಕೆಫೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗುವುದು.