ದಿಲ್ಲಿ ರೈಲುನಿಲ್ದಾಣ ಕಾಲ್ತುಳಿತಕ್ಕೆ ಪ್ರಯಾಣಿಕನ ಲಗೇಜ್ ಕಾರಣ!

ಫೆಬ್ರವರಿಯಲ್ಲಿ ದಿಲ್ಲಿಯ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 18 ಮಂದಿ ಸಾವನ್ನಪ್ಪಿದ್ದರು
ಪ್ರಯಾಣಿಕರೊಬ್ಬರು ತಲೆ ಮೇಲೆ ಹೊತ್ತಿದ್ದ ದೊಡ್ಡ ಲಗೇಜ್ ಕೆಳಗೆ ಬಿದ್ದುದು ಕಾಲ್ತುಳಿತ ಘಟನೆಗೆ ಕಾರಣ ಎಂದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಸಂಸದ ರಾಮ್ಜೀ ಲಾಲ್ ಸುಮನ್ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಸಚಿವರು ಈ ಅಂಶವನ್ನು ಸ್ಪಷ್ಟಪಡಿಸಿದ್ದಾರೆ
ಪ್ಲಾಟ್‌ಫಾರಂ 14 ಮತ್ತು 15ನ್ನು ಸಂಪರ್ಕಿಸುವ ಮೆಟ್ಟಲಲ್ಲಿ ರಾತ್ರಿ 9.15-9.30ರ ಅವಧಿಯಲ್ಲಿ ಕಾಲ್ತುಳಿತ ಸಂಭವಿಸಿತ್ತು.
ಪ್ರಯಾಗ್ರಾಜ್ ನಲ್ಲಿ ನಡೆಯುತ್ತಿದ್ದ ಕುಂಭಮೇಳಕ್ಕೆ ತೆರಳಲು ದೊಡ್ಡಸಂಖ್ಯೆಯಲ್ಲಿ ಸೇರಿದ್ದ ಪ್ರಯಾಣಿಕರು ಬಿಹಾರದಿಂದ ಬರುತ್ತಿದ್ದ ರೈಲಿಗಾಗಿ ಕಾಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿತ್ತು