ಜನಪ್ರಿಯ ಮಧುಮೇಹ, ತೂಕ ಇಳಿಕೆ ಔಷಧಗಳಿಂದ ಅಪರೂಪದ ದೃಷ್ಟಿನಷ್ಟ ಸಾಧ್ಯತೆ

ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ಒಝೆಂಪಿಕ್,ರೈಬೆಲ್ಸಸ್ ಮತ್ತು ವೆಗೋವಿ ಸೇರಿದಂತೆ ಸೆಮಾಗ್ಲುಟೈಡ್ ಒಳಗೊಂಡಿರುವ ಮಧುಮೇಹ ಮತ್ತು ತೂಕ ಇಳಿಕೆ ಔಷಧಿಗಳಿಂದ ಅಪರೂಪದ ದೃಷ್ಟಿನಷ್ಟ ಸಾಧ್ಯತೆ
ಗುಣಪಡಿಸಲು ಸಾಧ್ಯವಾಗದ ದೃಷ್ಟಿನಷ್ಟದ ಕುರಿತು WHO ಜಾಗತಿಕ ಸುರಕ್ಷತಾ ಎಚ್ಚರಿಕೆಯನ್ನು ಹೊರಡಿಸಿದೆ
ಜೂ.27ರಂದು ಹೊರಡಿಸಲಾಗಿರುವ ಎಚ್ಚರಿಕೆಯು ನಾನ್-ಆರ್ಟೆರಿಕ್ ಅಂಟೀರಿಯರ್ ಇಸ್ಕೆಮಿಕ್ ನ್ಯೂರೋಪತಿ(ಎನ್‌ಎಐಒಎನ್)ಯ ಅಪಾಯವನ್ನು ಎತ್ತಿ ತೋರಿಸಿದೆ.
ಇದು ಸಾಮಾನ್ಯವಾಗಿ ಒಂದು ಕಣ್ಣಿನಲ್ಲಿ ಹಠಾತ್, ನೋವುರಹಿತ ಮತ್ತು ಗುಣಪಡಿಸಲಾಗದ ದೃಷ್ಟಿ ನಷ್ಟಕ್ಕೆ ಕಾರಣವಾಗಬಲ್ಲದು
ಪ್ರಸ್ತುತ ಎನ್‌ಎಐಒಎನ್‌ಗೆ ಯಾವುದೇ ಪರಿಣಾಮಕಾರಿ ಚಿಕಿತ್ಸೆ ಲಭ್ಯವಿಲ್ಲ ಮತ್ತು ದೃಷ್ಟಿ ನಷ್ಟವನ್ನು ಸಾಮಾನ್ಯವಾಗಿ ಗುಣಪಡಿಸಲು ಸಾಧ್ಯವಿಲ್ಲ
ಸೆಮಾಗ್ಲುಟೈಡ್ ಟೈಪ್ 2 ಮಧುಮೇಹ ಮತ್ತು ಬೊಜ್ಜು ಚಿಕಿತ್ಸೆಗಾಗಿ ಜಾಗತಿಕವಾಗಿ ವ್ಯಾಪಕ ಬಳಕೆಯಲ್ಲಿದೆ.
ಆದಾಗ್ಯೂ ಈ ಔಷಧಿಗಳ ಹೆಚ್ಚುತ್ತಿರುವ ಜನಪ್ರಿಯತೆಯು ಹೊಸ ಸುರಕ್ಷತಾ ಕಳವಳಗಳ ಮೇಲೆ ಬೆಳಕು ಚೆಲ್ಲಿದೆ
ಈ ಸಂಭಾವ್ಯ ಅಪಾಯದ ಬಗ್ಗೆ ರೋಗಿಗಳಿಗೆ ಮಾಹಿತಿ ನೀಡುವಂತೆ ಮತ್ತು ಜಾಗರೂಕರಾಗಿರುವಂತೆ ವಿಶ್ವಾದ್ಯಂತ ವೈದ್ಯರಿಗೆ ಸೂಚನೆ