ಇನ್ನು ಮುಂದೆ ರೈಲು ಹೊರಡುವ ಎಂಟು ಗಂಟೆ ಮೊದಲೇ ರಿಸರ್ವೇಶನ್ ಚಾರ್ಟ್ ಸಿದ್ಧ

ಪ್ರಯಾಣಿಕರಿಗೆ ಅನುಕೂಲವಾಗಲು ಶೀಘ್ರದಲ್ಲೇ ರೈಲು ಹೊರಡುವ 8 ಗಂಟೆ ಮುಂಚಿತವಾಗಿ ರಿಸರ್ವೇಶನ್ ಚಾರ್ಟ್ (ದೃಢೀಕೃತ ಬರ್ತ್/ ಸೀಟ್) ಸಿದ್ಧಪಡಿಸುವ ವ್ಯವಸ್ಥೆ ಆರಂಭಿಸಲಿರುವ ಭಾರತೀಯ ರೈಲ್ವೆ
ಟಿಕೆಟ್ ಬುಕ್ ಮಾಡುವಾಗ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳಲು ಪ್ರಯಾಣಿಕರಿಗೆ ಅವಕಾಶ
ಬಸ್ ಟಿಕೆಟ್ ಬುಕಿಂಗ್‌ನಲ್ಲಿ ಈ ಅವಕಾಶ ಇತ್ತು.
ಹಾಲಿ ಇರುವ ವ್ಯವಸ್ಥೆಯಲ್ಲಿ ರೈಲು ಹೊರಡುವ ನಾಲ್ಕು ಗಂಟೆ ಮುನ್ನ ಚಾರ್ಟ್ ಸಿದ್ಧಪಡಿಸಲಾಗುತ್ತಿದ್ದು, ಇದು ಪ್ರಯಾಣಿಕರ ಮನಸ್ಸಿನಲ್ಲಿ ಅನಗತ್ಯ ಅನಿಶ್ಚಿತತೆ ಉಂಟಾಗುತ್ತದೆ.
ಹೊಸ ಸಮಯಮಿತಿ ವೈಟಿಂಗ್‌ ಲಿಸ್ಟ್‌ನಲ್ಲಿರುವ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ.
ತಮ್ಮ ವೈಟ್‌ ಲಿಸ್ಟ್‌ನ ಬಗೆಗೆ ಮಾಹಿತಿಯನ್ನು ಸಾಕಷ್ಟು ಮುಂಚಿತವಾಗಿಯೇ ಪಡೆಯಲಿದ್ದಾರೆ.
ಡಿಸೆಂಬರ್ ಗೆ ಮುನ್ನ ಸಮಗ್ರ ಪ್ರಯಾಣಿಕ ಕಾಯ್ದಿರಿಸುವಿಕೆ ವ್ಯವಸ್ಥೆಯನ್ನು ಪರಿಷ್ಕರಿಸಲು ಕೂಡಾ ರೈಲ್ವೆ ಮಂಡಳಿ ಚಿಂತನೆ ನಡೆಸಿದೆ.