ಎರಡು ದಶಕದಿಂದ ಭಾರತದಲ್ಲಿ ಯುವಕರ ಸಾವಿಗೆ ಆತ್ಮಹತ್ಯೆ ಪ್ರಮುಖ ಕಾರಣ!

15-29 ವರ್ಷ ವಯೋಮಿತಿಯ ಯುವಕರ ಸಾವಿಗೆ ಆತ್ಮಹತ್ಯೆ ಅಗ್ರ ಎರಡು ಕಾರಣಗಳ ಪೈಕಿ ಒಂದಾಗಿದೆ ಎಂಬುದು ವಿಶ್ಲೇಷಣೆಯಿಂದ ದೃಢ
2020-22ರ ಅವಧಿಯಲ್ಲಿ ಮೃತಪಟ್ಟ ಪ್ರತಿ ಆರು ಮಂದಿಯ ಪೈಕಿ ಒಬ್ಬರ ಸಾವಿಗೆ ಆತ್ಮಹತ್ಯೆ ಕಾರಣ
ಜಾಗತಿಕ ಮಟ್ಟದಲ್ಲಿ ಅತ್ಮಹತ್ಯೆ ಯುವಕರ ಸಾವಿಗೆ ಮೂರನೇ ಅತಿದೊಡ್ಡ ಕಾರಣ ಎಂದ ವಿಶ್ವ ಆರೋಗ್ಯ ಸಂಸ್ಥೆ
ಎಲ್ಲ ವಯೋಮಿತಿಯ ಜನರ ಸಾವಿನ ಕಾರಣಗಳನ್ನು ವಿಶ್ಲೇಷಿಸಿದಾಗ ಆತ್ಮಹತ್ಯೆ ಅಗ್ರ ಹತ್ತು ಕಾರಣಗಳಲ್ಲಿ ಸೇರಿಲ್ಲ
ಹೃದ್ರೋಗ ಸಮಸ್ಯೆ ಸಾವಿನ ಪ್ರಮುಖ ಕಾರಣ ಎನಿಸಿದ್ದು, ಉಸಿರಾಟದ ಸೋಂಕು ಮತ್ತು ಕ್ಯಾನ್ಸರ್ ನಂತರದ ಸ್ಥಾನಗಳಲ್ಲಿವೆ
2020-22ರ ಅವಧಿಯಲ್ಲಿ ಒಟ್ಟು ಮೃತಪಟ್ಟ ಯುವಜನರ ಪೈಕಿ ಶೇಕಡ 17.1 ರಷ್ಟು ಮಂದಿ ಆತ್ಮಹತ್ಯೆಯಿಂದ ಮೃತಪಟ್ಟಿದ್ದರೆ, ರಸ್ತೆ ಅಪಘಾತ (15.6%), ಹೃದ್ರೋಗ (9.8) ಸಾವಿಗೆ ಕಾರಣವಾಗಿದೆ
ಆತ್ಮಹತ್ಯೆಗೆ ಶರಣಾಗುವ ಯುವಜನತೆಯ ಪೈಕಿ ಯುವತಿಯರ ಪಾಲು (ಶೇಕಡ 18.2), ಯುವಕರಿಗಿಂತ (16.3%) ಅಧಿಕ