ಬಾಹ್ಯಕಾಶ ನಡಿಗೆಯಲ್ಲೂ ದಾಖಲೆ ನಿರ್ಮಿಸಿದ ಸುನೀತಾ ವಿಲಿಯಮ್ಸ್!

ಸುನೀತಾ ವಿಲಿಯಮ್ಸ್ ಅವರು ಅಂತರಿಕ್ಷದಲ್ಲಿ 62 ಗಂಟೆ 6 ನಿಮಿಷ ನಡೆದು ದಾಖಲೆ ನಿರ್ಮಿಸಿದರು.
ವಿಲಿಯಮ್ಸ್ ಅವರ ಈ ಹೊಸ ದಾಖಲೆಯ ಕುರಿತು ಅಂತರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣ (ISS) ಹೇಳಿಕೆ ನೀಡಿದೆ.
ಈ ಸಾಧನೆಯನ್ನು ನಾಸಾ ತನ್ನ ವೇಬ್ ಸೈಟ್ ನಲ್ಲಿ ನೇರ ಪ್ರಸಾರ ಮಾಡಿತ್ತು.
ಗುರುವಾರ ವಿಲಿಯಮ್ಸ್ ಅವರು 5 ಗಂಟೆ 26 ನಿಮಿಷಗಳ ನಡಿಗೆ ನಡೆಸಿದ ಹಿಂದಿನ ದಾಖಲೆಯನ್ನು ಮುರಿದರು.
ವಿಲಿಯಮ್ಸ್ ಅವರು ಒಟ್ಟಾರೆ 9 ನಡಿಗೆ ನಡೆಸಿ, ಈ ದಾಖಲೆಯನ್ನು ನಿರ್ಮಿಸಿದರು.
ವಿಲಿಯಮ್ಸ್ ಅವರು ಸಹದ್ಯೋಗಿ ಬಚ್ ವಿಲ್ಮೋರೆ ಅವರೊಂದಿಗೆ ಜೂನ್ 2024ರಿಂದ ಅಂತರಿಕ್ಷದಲ್ಲಿದ್ದಾರೆ.
ಹಿಂದೆ, ಗಗನಯಾತ್ರಿ ಪೆಗ್ಗಿ ವಿಸ್ಟನ್ ಅವರ 60 ಗಂಟೆ 21 ನಿಮಿಷಗಳ ನಡಿಗೆ ನಡೆಸಿದ ದಾಖಲೆಯಾಗಿತ್ತು.
ಅಂತರಿಕ್ಷದಲ್ಲಿ ಎರಡು ಸಲ ಹುಟ್ಟುಹಬ್ಬವನ್ನು ಆಚರಿಸಿರುವ ದಾಖಲೆಯನ್ನೂ ಸುನೀತಾ ವಿಲಿಯಮ್ಸ್ ಅವರು ಬರೆದಿದ್ದಾರೆ.
ಮಾಹಿತಿ ಮೂಲ: Times of India