100 ಮೀ. ಫ್ರೀ ಸ್ಟೈಲಿನಲ್ಲಿ ‘ಶ್ರೇಷ್ಠ ಭಾರತೀಯ ದಾಖಲೆ’ ಸ್ಥಾಪಿಸಿದ ಈಜುಪಟು ಶ್ರೀಹರಿ ನಟರಾಜ್!

ಭಾರತೀಯ ಈಜುಪಟು ಶ್ರೀಹರಿ ನಟರಾಜ್ ತನ್ನ ದಾಖಲೆಯನ್ನೇ ಮುರಿದಿದ್ದಾರೆ
ಬರ್ಲಿನ್‌ ನಲ್ಲಿ ನಡೆಯುತ್ತಿರುವ ವಿಶ್ವ ವಿಶ್ವವಿದ್ಯಾನಿಲಯ ಗೇಮ್ಸ್ ನಲ್ಲಿ 49.46 ಸೆಕೆಂಡ್ ಗಳಲ್ಲಿ ಗುರಿ ತಲುಪುವಲ್ಲಿ ಸಫಲಗೊಂಡ ಶ್ರೀಹರಿ
ಈ ಮೂಲಕ ಅವರು ಸೆಮಿಫೈನಲ್ ಗೆ ಅರ್ಹತೆ ಪಡೆದಿದ್ದಾರೆ
ಅವರು 2008ರ ಗ್ವಾಂಗ್ಝೂ ಏಶ್ಯನ್ ಗೇಮ್ಸ್ ಪದಕ ವಿಜೇತ ವಿರ್ದವಾಲ್ ಖಡೆಯ ದೀರ್ಘಕಾಲೀನ 49.47 ಸೆಕೆಂಡುಗಳ ದಾಖಲೆಯನ್ನು ಹಿಂದಿಕ್ಕಿದ್ದಾರೆ
200 ಮೀಟರ್ ಫ್ರೀ ಸ್ಟೈಲ್ ಸ್ಪರ್ಧೆಯಲ್ಲಿ ತನ್ನದೇ ‘ಶ್ರೇಷ್ಠ ಭಾರತೀಯ ಸಮಯ’ವನ್ನು ಎರಡು ಬಾರಿ ಉತ್ತಮಪಡಿಸಿದ್ದರು.