ಬೆಂಗಳೂರಿನಲ್ಲಿ ದೇಶದಲ್ಲೇ ಅತಿ ದೊಡ್ಡ ಗೂಗಲ್ ಕ್ಯಾಂಪಸ್ ಕಾರ್ಯಾರಂಭ

ಗೂಗಲ್ ಸಂಸ್ಥೆಯು ಈ ಕಚೇರಿಗೆ 'ಅನಂತ' ಎಂದು ಹೆಸರಿಸಿದೆ.
ಈ ಕಟ್ಟಡದ ವಿಸ್ತೀರ್ಣ 16 ಲಕ್ಷ ಚದರ ಅಡಿ ಇದ್ದು ಸುಮಾರು 5000 ಮಂದಿ ಉದ್ಯೋಗಿಗಳಿಗೆ ಇಲ್ಲಿ ಅವಕಾಶವಿದೆ
ಗೂಗಲ್ ಸರ್ಚ್, ಮ್ಯಾಪ್ಸ್, AI, ಆಂಡ್ರಾಯ್ಡ್, ಗೂಗಲ್ ಪೇ, ಕ್ಲೌಡ್ ಸೇರಿದಂತೆ ವಿವಿಧ ಕೆಲಸಗಳು ಇಲ್ಲಿ ನಡೆಯಲಿದೆ.
ಕಳೆದ ಹಲವಾರು ವರ್ಷಗಳಿಂದ, ಗೂಗಲ್ ಭಾರತದಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿದೆ.
ಇತರ ಗೂಗಲ್ ಕಚೇರಿಗಳಂತೆಯೇ, 'ಅನಂತ' ಕ್ಯಾಂಪಸ್ ಸಹ ಪರಿಸರ ಸ್ನೇಹಿಯಾಗಿದೆ
ಈ ಕ್ಯಾಂಪಸ್ ನಲ್ಲಿ ಮಳೆನೀರು ಮತ್ತು ತ್ಯಾಜ್ಯ ನೀರನ್ನು ಮರುಬಳಕೆ ಮಾಡಲಾಗುತ್ತದೆ
ಬೆಂಗಳೂರಿನ 'ಉದ್ಯಾನ ನಗರಿ' ಎಂಬ ಹೆಸರಿನಿಂದ ಈ ಕ್ಯಾಂಪಸ್ ಮೈದಾನವು ಸ್ಪೂರ್ತಿ ಪಡೆದಿದೆ.
ಜಾಗಿಂಗ್ ಪಾಥ್ ಗಳು, ಸೀಟಿಂಗ್ ಏರಿಯಾಗಳು, ಸಾಮಾನ್ಯ ಭೇಟಿಗಳಿಗೆ ಮತ್ತು ಮಾತುಕತೆಗಳಿಗೆ ಈ ಜಾಗ ಸೂಕ್ತವಾಗುವಂತೆ ನಿರ್ಮಿಸಲಾಗಿದೆ.
ಜಿಮ್, ಬ್ಯಾಡ್ಮಿಂಟನ್, ಪಿಕಲ್‌ಬಾಲ್, ವಾಲಿಬಾಲ್, ಕ್ರಿಕೆಟ್ ಮತ್ತು ಇತರ ಕೋರ್ಟ್‌ ಗಳನ್ನು ಹೊಂದಿವೆ
ಗೂಗಲ್ ಭಾರತದಲ್ಲಿ ಗುರುಗ್ರಾಮ , ಹೈದರಾಬಾದ್, ಮುಂಬೈ ಮತ್ತು ಪುಣೆ ಸೇರಿದಂತೆ ಹಲವಾರು ಕಚೇರಿಗಳನ್ನು ಹೊಂದಿದ್ದು, 11,000ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ.