ಮಿಗ್-21 ಯುದ್ಧ ವಿಮಾನಗಳ ಯುಗ ಅಂತ್ಯ

ಸೇವೆಯಿಂದ ಹಿಂಪಡೆಯಲು ಐಎಎಫ್ ನಿರ್ಧಾರ
ಮಿಗ್-21 ಬದಲಿಗೆ ತೇಜಸ್ ಎಂಕೆ1ಎ ಯುದ್ಧವಿಮಾನಗಳನ್ನು ಬಳಸಲಿದೆ
ಭಾರತೀಯ ವಾಯುಪಡೆ ಪ್ರಸ್ತುತ 36 ಮಿಗ್-21 ಯುದ್ಧ ವಿಮಾನಗಳನ್ನು ಹೊಂದಿವೆ
ಅವುಗಳ ಪೈಕಿ 'ಬೈಸನ್' ಮಾದರಿಯ ಯುದ್ಧ ವಿಮಾನಗಳ ಬಳಕೆ ಕೊನೆಗಾಣಲಿದೆ.
ಪಾಕಿಸ್ತಾನದೊಂದಿಗೆ 1965 ಯುದ್ಧ, 1971 ಬಾಂಗ್ಲಾದೇಶ ವಿಮೋಚನಾ ಯುದ್ಧ, 1999 ಕಾರ್ಗಿಲ್ ಯುದ್ಧ, 2019 ಬಾಲಕೋಟ ವೈಮಾನಿಕ ದಾಳಿಗಳಲ್ಲಿ ಈ ವಿಮಾನಗಳು ಮುಖ್ಯ ಪಾತ್ರ ವಹಿಸಿದ್ದವು
ಇತ್ತೀಚೆಗೆ ಈ ಯುದ್ಧ ವಿಮಾನಗಳು ಹಲವು ಬಾರಿ ಅಪಘಾತಕ್ಕೆ ಈಡಾಗಿದ್ದವು
ಈ ಕಾರಣ ಐಎಎಫ್ ಇವುಗಳ ಬಳಕೆ ಹಂತ ಹಂತವಾಗಿ ರದ್ದುಗೊಳಿಸುವ ನಿರ್ಧಾರಕ್ಕೆ ಬಂದಿದೆ
ಮಿಗ್-21 ಯುದ್ಧ ವಿಮಾನಗಳ ಬಳಕೆ ನಿಲ್ಲಿಸುವುದಾಗಿ 2023ರಲ್ಲೇ ಐಎಎಫ್ ಘೋಷಿಸಿತ್ತು.