‘3 ಈಡಿಯಟ್ಸ್’ ಖ್ಯಾತಿಯ ಹಿರಿಯ ನಟ ಅಚ್ಯುತ್‌ ಪೋತ್ದಾರ್ ನಿಧನ

ಅನಾರೋಗ್ಯದಿಂದ ಬಳಲುತ್ತಿದ್ದ ಮರಾಠಿಯ ಜನಪ್ರಿಯ ನಟ
ನಾಲ್ಕು ದಶಕಗಳ ವೃತ್ತಿ ಜೀವನದಲ್ಲಿ 125ಕ್ಕೂ ಹೆಚ್ಚು ಮರಾಠಿ ಹಾಗೂ ಹಿಂದಿ ಚಲನಚಿತ್ರಗಳಲ್ಲಿ ಅಭಿನಯ
ಆಕ್ರೋಶ್, ಅರ್ಧ್ ಸತ್ಯ, ತೇಝಾಬ್, ಪರಿಂದಾ ಸಹಿತ ಹಲವು ಚಿತ್ರಗಳಲ್ಲಿನ ತಮ್ಮ ಅಭಿನಯದಿಂದ ಅವರು ಮನೆ ಮಾತಾಗಿದ್ದ ಅಚ್ಯುತ್‌
ಆಮಿರ್ ಖಾನ್ ನಾಯಕತ್ವದ ‘3 ಈಡಿಯಟ್ಸ್’ ಚಿತ್ರದಲ್ಲಿ ಪ್ರೊಫೆಸರ್ ಪಾತ್ರ ನಿರ್ವಹಿಸಿ ಖ್ಯಾತಿ ಪಡೆದಿದ್ದರು
‘3 ಈಡಿಯಟ್ಸ್’ ನಲ್ಲಿನ ‘ಕೆಹ್ನ ಕ್ಯಾ ಚಾಹ್ತೆ ಹೋʼ ಸಂಭಾಷಣೆ ವೈರಲ್‌ ಆಗಿತ್ತು
ಹಲವು ಟಿವಿ ಧಾರಾವಾಹಿಗಳಲ್ಲೂ ನಟಿಸಿದ್ದ ಅಚ್ಯುತ್ ಪೋತ್ದಾರ್ ತಮ್ಮದೇ ಆದ ನಟನೆಯಿಂದ ಛಾಪು ಮೂಡಿಸಿದ್ದರು