ವಿರಾಟ್ ಕೊಹ್ಲಿಯ ಬಿಳಿ ಗಡ್ಡದ ಚಿತ್ರ ವೈರಲ್

ಗರಿಗೆದರಿದ ಏಕದಿನ ಕ್ರಿಕೆಟ್ ನಿವೃತ್ತಿ ಕುರಿತ ಚರ್ಚೆ!
ಶಶ್ ಪಟೇಲ್ ಎಂಬವರೊಂದಿಗಿರುವ ಕೊಹ್ಲಿ ಚಿತ್ರವು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ
ಕೊಹ್ಲಿಯ ಏಕದಿನ ಕ್ರಿಕೆಟ್ ನಿವೃತ್ತಿಯ ಸಂಕೇತವಾಗಿರಬಹುದು ಎಂದ ಜನರು
ಕೊಹ್ಲಿಯ ಈ ರೀತಿಯ 'ಲುಕ್' ಮೊದಲ ಬಾರಿಯೇನು ಗಮನ ಸೆಳೆಯುತ್ತಿರುವುದಲ್ಲ.
2023ರಲ್ಪಲಿತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ತೆಗೆಯಲಾದ ಫೋಟೋದಲ್ಲೂ ಅವರ ಬೂದು ಗಡ್ಡ ಅಭಿಮಾನಿಗಳ ಗಮನಕ್ಕೆ ಬಂದಿತ್ತು.
ಕಳೆದ ವರ್ಷ ವೆಸ್ಟ್ ಇಂಡೀಸ್‌ ನಲ್ಲಿ ಭಾರತ ವಿಶ್ವಕಪ್ ಗೆದ್ದ ನಂತರ ಕೊಹ್ಲಿ ಟಿ20 ಅಂತರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತರಾದರು.
ಮೇ 2025ರಲ್ಲಿ 14 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್‌ ಗೆ ವಿದಾಯ ಹೇಳಿ ಕ್ರಿಕೆಟ್ ಜಗತ್ತಿಗೆ ಅಚ್ಚರಿ ಉಂಟುಮಾಡಿದ್ದರು.