ಮತದಾರರ ಪರಿಷ್ಠರಣೆಯೋ? ಪೌರತ್ವ ಪರಿಷ್ಕರಣೆಯೋ?

ಬಿಹಾರದಲ್ಲಿ ಕೇಂದ್ರ ಚುನಾವಣಾ ಆಯೋಗದ ಮತದಾರ ಪಟ್ಟಿಯ ತೀವ್ರ ಪರಿಷ್ಕರಣೆ ವಿವಾದಕ್ಕೆ ಕಾರಣವಾಗಿದೆ
ಆಯೋಗದ ಈ ಕ್ರಮದಿಂದ ಬಿಹಾರದಲ್ಲಿ ಶೇ. 30ಕ್ಕೂ ಅಧಿಕ ಮತದಾರರು ಮತದಾನದಿಂದ ಹೊರಗುಳಿಯುವ ಸಾಧ್ಯತೆ!
ಮತದಾರರ ಪಟ್ಟಿ ಪರಿಷ್ಕರಣೆ ಜುಲೈ 25ರೊಳಗೆ ಪೂರ್ಣಗೊಳಿಸುವುದಾಗಿ ಚುನಾವಣ ಆಯೋಗ ತಿಳಿಸಿತ್ತು.
ಆಯೋಗ ನೀಡಿರುವ ಅವಧಿಯೊಳಗೆ ದಾಖಲೆಗಳನ್ನು ಸಲ್ಲಿಸಲು ಕಷ್ಟವಾಗುತ್ತಿದೆ ಎಂದು ಗ್ರಾಮೀಣ ಪ್ರದೇಶದ ಕಾರ್ಮಿಕರ ಅಳಲು
ಈ ವಿವಾದ ಇದೀಗ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದೆ.
ಮತದಾರರನ್ನು ಗುರುತಿಸುವ ದಾಖಲೆಗಳಾದ ಆಧಾರ್ ಕಾರ್ಡ್, ವೋಟರ್ ಐಟಿ, ಪಡಿತರ ಚೀಟಿ ಸ್ವೀಕರಿಸಲು ಅಡ್ಡಿಯೇನು ಎಂದು ಚುನಾವಣಾ ಆಯೋಗವನ್ನು ಪ್ರಶ್ನಿಸಿದ ನ್ಯಾಯಾಲಯ
ಈಗಾಗಲೇ ಮಾಜಿ ಚುನಾವಣಾ ಆಯುಕ್ತರು ಮತ್ತು ತಜ್ಞರು ಚುನಾವಣಾ ಆಯೋಗದ ಈ ಕ್ರಮವನ್ನು ಪ್ರಶ್ನಿಸಿದ್ದಾರೆ