ಹೊಸ ಪಾಸ್‌ಪೋರ್ಟ್‌ ನಿಯಮಗಳಲ್ಲಿ ಏನೆಲ್ಲಾ ಬದಲಾವಣೆಯಾಗಿದೆ?

ಜನನ ಪ್ರಮಾಣಪತ್ರ ಸಲ್ಲಿಕೆ ಕಡ್ಡಾಯ
-2023ರ ಅಕ್ಟೋಬರ್ 1ರ ಬಳಿಕ ಜನಿಸಿದವರಿಗೆ ಜನನ ಪ್ರಮಾಣಪತ್ರವೇ ಏಕೈಕ ಮಾನ್ಯ ದಾಖಲೆ ಆಗಲಿದೆ. ಆದರೆ, ಅಕ್ಟೋಬರ್ 1, 2023ರ ಮೊದಲು ಜನಿಸಿದವರಿಗೆ ಹಳೆಯ ನಿಯಮವೇ ಜಾರಿಯಲ್ಲಿ ಇರಲಿದೆ.
ಪಾಸ್‌ಪೋರ್ಟ್‌ನಲ್ಲಿ ಮನೆ ವಿಳಾಸ ಇರುವುದಿಲ್ಲ
ಇನ್ನು ಮುಂದೆ ಮನೆ ವಿಳಾಸಕ್ಕೆ ಸಂಬಂಧಿಸಿದ ಮಾಹಿತಿ ಪಾಸ್‌ಪೋರ್ಟ್‌ನಲ್ಲಿ ಡಿಜಿಟಲ್ ಬಾರ್ಕೋಡ್‌ನಲ್ಲಿ ಮಾತ್ರ ಇರಲಿದೆ. ಇಮಿಗ್ರೇಷನ್ ಅಧಿಕಾರಿಗಳು ಈ ಬಾರ್ಕೋಡ್ ನ್ನು ಸ್ಕ್ಯಾನ್ ಮಾಡಬಹುದು.
ಹೊಸ ಕಲರ್ ಕೋಡ್
ಪಾಸ್‌ಪೋರ್ಟ್‌ಗಳನ್ನು ಸುಲಭವಾಗಿ ಗುರುತಿಸಲು ಹೊಸ ಬಣ್ಣದ ಕೋಡ್ ವ್ಯವಸ್ಥೆ ಜಾರಿಗೆ ತರಲಾಗಿದೆ.
ಸರಕಾರಿ ಅಧಿಕಾರಿಗಳಿಗೆ ಬಿಳಿ, ರಾಜತಾಂತ್ರಿಕರಿಗೆ ಕೆಂಪು, ಸಾಮಾನ್ಯ ನಾಗರಿಕರಿಗೆ ಈಗಿರುವಂತೆಯೇ ನೀಲಿ ಬಣ್ಣದ ಪಾಸ್‌ಪೋರ್ಟ್‌ ಸಿಗಲಿದೆ.
ಪಾಸ್‌ಪೋರ್ಟ್‌ನಲ್ಲಿ ಪೋಷಕರ ಹೆಸರನ್ನು ಕೊನೆಯ ಪುಟದಲ್ಲಿ ಮುದ್ರಿಸುವ ನಿಯಮವನ್ನು ತೆಗೆದುಹಾಕಲಾಗಿದೆ
ಈ ಹೊಸ ನಿಯಮಗಳಿಂದ ಜನರಿಗೆ ಆಗುವ ಪ್ರಯೋಜನವೇನು?
ಜನನ ಪ್ರಮಾಣಪತ್ರ ಕಡ್ಡಾಯವಾಗಿರುವುದರಿಂದ ದಾಖಲೆ ವಂಚನೆ ತಡೆಯಬಹುದು.
ಮನೆ ವಿಳಾಸ ಗೌಪ್ಯತೆ ಕಾಪಾಡುವ ರೀತಿಯಲ್ಲಿ ಡಿಜಿಟಲ್ ಮಾದರಿಯಲ್ಲಿ ಇರಲಿದೆ.
ಹೊಸ ಕಲರ್ ಕೋಡ್ ಪಾಸ್‌ಪೋರ್ಟ್‌ ಗುರುತಿಸುವಿಕೆಯನ್ನು ಸುಲಭಗೊಳಿಸುತ್ತದೆ.
ಪೋಷಕರ ಹೆಸರು ಮುದ್ರಣದ ಅವಶ್ಯಕತೆ ಇಲ್ಲದ ಕಾರಣ ಅನಾಥರು, ಓರ್ವ ಪೋಷಕರ ಕುಟುಂಬದವರು ಸುಲಭವಾಗಿ ಅರ್ಜಿ ಸಲ್ಲಿಸಬಹುದು