ನೊಬೆಲ್ ಪ್ರಶಸ್ತಿ ಪಡೆದ ಫೆಲೆಸ್ತೀನ್ ನಿರಾಶ್ರಿತ ವಿಜ್ಞಾನಿ ಉಮರ್‌ ಯಾರು?

2025ರ ಸಾಲಿನ ರಸಾಯನ ಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದವರಲ್ಲಿ ಒಬ್ಬರು ಉಮರ್ ಮುವನ್ನಿಸ್ ಯಾಘಿ
ಉಮರ್ ಫೆಲೆಸ್ತೀನ್ ಮೂಲದ ಜೋರ್ಡಾನಿಯನ್-ಅಮೆರಿಕನ್ ರಸಾಯನ ವಿಜ್ಞಾನಿ
ಕ್ಯಾಲಿಫೋರ್ನಿಯ ವಿವಿಯಲ್ಲಿ ರಸಾಯನ ಶಾಸ್ತ್ರದಲ್ಲಿ ನೀಲ್‌ ಟ್ಯೆ ಟ್ರೆಟರ್ ಎಂಡೋಡ್ ಚೇರ್ ಹಾಗೂ ಪ್ರೊಫೆಸರ್ ಆಗಿದ್ದಾರೆ
ಉಮರ್ 1990ರಲ್ಲಿ ಇಲಿನಾಯಿಸ್ ವಿಶ್ವವಿದ್ಯಾನಿಲಯದಿಂದ ರಸಾಯನ ಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದಿದ್ದಾರೆ
ಹಾರ್ವರ್ಡ್ ವಿವಿಯಲ್ಲಿ (1990-92) ಪೋಸ್ಟ್ ಡಾಕ್ಟೋರಲ್ ರಿಸರ್ಚ್ ಮಾಡಿದ್ದಾರೆ
1996ರಿಂದ 2006ರವರೆಗೆ ಮಿಶಿಗನ್ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸಿದ್ದರು.
ʼರೆಟಿಕ್ಯುಲರ್ ಕೆಮಿಸ್ಟ್ರಿʼ ಎಂಬ ಹೊಸ ಸಂಶೋಧನಾ ಕ್ಷೇತ್ರವನ್ನು ಬೆಳೆಸಿದ ಕೀರ್ತಿ ಉಮರ್ ಅವರಿಗೆ ಸಲ್ಲುತ್ತದೆ
ಹವಾಮಾನ ಬದಲಾವಣೆ, ಇಂಗಾಲ ಹೆಚ್ಚಳ ಮತ್ತು ಶುದ್ಧ ನೀರಿನ ಕೊರತೆ ನೀಗಿಸಲು ಸಹಾಯ ಮಾಡುವ ಅದ್ಭುತ ಸಂಶೋಧನೆಗೆ ಮೆಟಲ್-ಆರ್ಗಾನಿಕ್ ಫ್ರೇಮ್ವರ್ಕ್ಸ್ ಅನ್ನು ಅವರು ಅಭಿವೃದ್ಧಿಪಡಿಸಿದರು.
ಈ ಸಂಶೋಧನೆಗೆ ಅವರಿಗೆ ನೊಬೆಲ್ ಪ್ರಶಸ್ತಿ ಲಭಿಸಿದೆ
ನೊಬೆಲ್ ಗೂ ಮೊದಲು ಉಮರ್ ಅವರಿಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು, ಗೌರವಗಳು, ಫೆಲೋಶಿಪ್ ಗಳು ಸಿಕ್ಕಿವೆ.