ನ್ಯೂಯಾರ್ಕ್ ನ ನೂತನ ಮೇಯರ್ ಆಗಿ ಇತಿಹಾಸ ಬರೆದ ಝೋಹ್ರಾನ್ ಮಮ್ದಾನಿ ಯಾರು?

ಜಗತ್ತಿನ ಅತ್ಯಂತ ಪ್ರತಿಷ್ಠಿತ ನಗರಗಳಲ್ಲಿ ಒಂದಾದ ಅಮೆರಿಕಾದ ನ್ಯೂಯಾರ್ಕ್ ನ ಮೇಯರ್ ಆಗಿ ಇಂಡಿಯನ್‌ ಅಮೆರಿಕನ್‌ ಮಮ್ದಾನಿ ಆಯ್ಕೆ
ಪ್ರಭಾವೀ ನಾಯಕ ಆಂಡ್ರೂ ಕುಮೋ ವಿರುದ್ಧ ಝೋಹ್ರಾನ್ ಮಮ್ದಾನಿಗೆ ಗೆಲುವು
ಇಸ್ರೇಲ್ ನ ಆಕ್ರಮಣ ನೀತಿಯ ಕಟು ಟೀಕಾಕಾರರು ಹಾಗು ಫೆಲೆಸ್ತೀನ್ ನ ಕಟ್ಟಾ ಬೆಂಬಲಿಗರು ಎಂದೂ ಮಮ್ದಾನಿ ಗುರುತಿಸಲ್ಪಟ್ಟಿದ್ದಾರೆ.
ಝೊಹ್ರಾನ್ ಭಾರತದಿಂದ ಉಗಾಂಡಕ್ಕೆ ವಲಸೆ ಹೋದ ಕುಟುಂಬದಿಂದ ಬಂದ ಶಿಕ್ಷಣ ತಜ್ಞ ಮಹಮೂದ್ ಮಮ್ದಾನಿ ಹಾಗು ಖ್ಯಾತ ಭಾರತೀಯ ಚಿತ್ರ ನಿರ್ದೇಶಕಿ ಮೀರಾ ನಾಯರ್ ಅವರ ಪುತ್ರ.
ಝೊಹ್ರಾನ್ ಹುಟ್ಟಿದ್ದು ಉಗಾಂಡದ ಕಂಪಾಲದಲ್ಲಿ. ಏಳು ವರ್ಷದವನಿರುವಾಗ ನ್ಯೂಯಾರ್ಕ್ ಗೆ ಬಂದರು.
ಝೊಹ್ರಾನ್ 2018 ರಲ್ಲಿ ಅಮೆರಿಕನ್ ಪ್ರಜೆಯಾದರು.
ಮೈನೆ ರಾಜ್ಯದ ಬೌಡೊಯ್ನ್ ಕಾಲೇಜಿನಲ್ಲಿ ಆಫ್ರಿಕನ್ ಸ್ಟಡೀಸ್ ನಲ್ಲಿ ಝೊ ಪದವಿ ಪಡೆದಿದ್ದಾರೆ
ಈ ವರ್ಷದ ಪ್ರಾರಂಭದಲ್ಲಿ ಸಿರಿಯನ್ ಕಲಾವಿದೆ ರಮಾ ದುವಾಜಿಯನ್ನು ವಿವಾಹವಾಗಿದ್ದಾರೆ
ರಾಜಕೀಯಕ್ಕೆ ಬರುವ ಮೊದಲು ಸರಕಾರ ಒಕ್ಕಲೆಬ್ಬಿಸುವ ವಿರುದ್ಧ ಹೋರಾಡಲು ಬಡವರಿಗೆ ಅವರು ನೆರವಾಗುತ್ತಿದ್ದರು.
ರ್ಯಾಪ್ ಸಂಗೀತ ಹಾಗು ಬರಹ ರಂಗದಲ್ಲೂ ಕೈಯಾಡಿಸಿದ್ದರು.