ಯಾದಗಿರಿ | ಗುರುಮಠಕಲ್ ಪ್ರಜಾಸೌಧ ಅಡಿಗಲ್ಲು ಸಮಾರಂಭದಲ್ಲಿ ಜೆಡಿಎಸ್–ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ

ಯಾದಗಿರಿ : ಕಂದಾಯ ಇಲಾಖೆಯ ವತಿಯಿಂದ ಗುರುಮಠಕಲ್ ಪಟ್ಟಣದಲ್ಲಿ ಭಾನುವಾರ ನಡೆದ ತಾಲೂಕು ಪ್ರಜಾಸೌಧ ಅಡಿಗಲ್ಲು ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಭಾಷಣ ಮಾಡುತ್ತಿದ್ದಾಗ ಶಾಸಕ ಶರಣಗೌಡ ಕಂದಕೂರ ಪರ ಅಭಿಮಾನಿಗಳು “SNK, SNK” ಎಂದು ಘೋಷಣೆ ಕೂಗಿದ್ದು, ಜೆಡಿಎಸ್–ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆಗೆ ಕಾರಣವಾಯಿತು.
ಈ ವೇಳೆ ಲು ಸ್ವತಃ ಶಾಸಕ ಶರಣಗೌಡ ಕಂದಕೂರ ಅವರು ತಮ್ಮ ಅಭಿಮಾನಿಗಳತ್ತ ತಿರುಗಿ ಕೈಮುಗಿದು ಶಾಂತಗೊಳಿಸಲು ಮನವಿ ಮಾಡಿದರು. ಅವರ ಹಸ್ತಕ್ಷೇಪದ ನಂತರ ಪರಿಸ್ಥಿತಿ ಹತೋಟಿಗೆ ಬಂದು ಸಮಾರಂಭವು ಸಾಮಾನ್ಯವಾಗಿ ಮುನ್ನಡೆಯಿತು.
ಒಂದೆಡೆ ಅಡಿಗಲ್ಲು ಕಾರ್ಯಕ್ರಮ ನಡೆಯುತ್ತಿದ್ದರೆ, ಇನ್ನೊಂದೆಡೆ ರಾಜಕೀಯ ಘೋಷಣೆ–ಪ್ರತಿಘೋಷಣೆಯು ಚರ್ಚೆಗೆ ಗ್ರಾಸವಾಯಿತು.
Next Story





