ಯಾದಗಿರಿ | ಜಿಲ್ಲೆಯಾದ್ಯಂತ ಮಿಲಾದುನ್ನಭಿ ಆಚರಣೆ

ಯಾದಗಿರಿ: ಪ್ರವಾದಿ ಮುಹಮ್ಮದ್‌ರ ಜನ್ಮದಿನದ ಅಂಗವಾಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಮರು ಶ್ರದ್ಧಾ ಭಕ್ತಿಯಿಂದ ಮಿಲಾದುನ್ನಭಿ ಆಚರಿಸಿದರು.
ಮಕ್ಕಾ, ಮದೀನಾ, ನಕ್ಷತ್ರ, ಮಸೀದಿ ಸೇರಿದಂತೆ ವಿವಿಧ ಸ್ತಬ್ಧ ಚಿತ್ರಗಳ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ನಗರದ ಮೈಲಾಪುರ ಅಗಸಿ ಹತ್ತಿರ ಮೆರವಣಿಗೆಗೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಚಾಲನೆ ನೀಡಿದರು.
ನಗರದ ತಂಜುಮುಲ್ ಮುಸ್ಲಿಮೀನ್ ಮತ್ತು ಬೈತುಲ್ ಮಾಲ್ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಮಾತನಾಡಿದರು.
ಮೌಲ್ವಿಗಳಾದ ಮುಹಮ್ಮದ್ ನಿಜಾಮುದ್ದೀನ್, ಮುಹಮ್ಮದ್ ಸಲೀಂ, ಬೈತುಲ್ ಮಾಲ್ ಸಂಘದ ಅಧ್ಯಕ್ಷ ಗುಲಾಂ ಸಂದಾನಿ ಮೂಸಾ, ತಂಜಿಮುಲ್ ಮುಸ್ಲಿಮೀನ್ ಉಪಾಧ್ಯಕ್ಷ ವಹೀದ್ ಮಿಯಾ, ಕಾರ್ಯದರ್ಶಿಗಳಾದ ಇರ್ಫಾನ್ ಬದಲ್, ಜಿಲಾನಿ ಅಫ್ಘಾನ್, ಸದಸ್ಯರಾದ ಇನಾಯತ್ ರಹಮಾನ್, ಮನ್ಸೂರ್ ಅಫ್ಘಾನ್ ಇತರರಿದ್ದರು.
Next Story





