ಯಾದಗಿರಿ | ಸಂಚಾರಿ ಠಾಣೆಯ ಸಿಬ್ಬಂದಿ ವಿರುದ್ಧ ಅತ್ಯಾಚಾರ ಆರೋಪ : ಪ್ರಕರಣ ದಾಖಲು

ಯಾದಗಿರಿ: ಸಂಚಾರಿ ಠಾಣೆಯ ಪೊಲೀಸ್ ಸಿಬ್ಬಂದಿ ಮತ್ತು ಆತನ ಸಹೋದರನ ವಿರುದ್ಧ ಸಂಬಂಧಿ ಮಹಿಳೆಯೊರ್ವರು ಅತ್ಯಾಚಾರ ಆರೋಪಿಸಿ ಯಾದಗಿರಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳನ್ನು ಪೊಲೀಸ್ ಸಿಬ್ಬಂದಿ ರಮೇಶ್ ಮತ್ತು ಜೆಸ್ಕಾಂ ಸಿಬ್ಬಂದಿ ಲಕ್ಷ್ಮಣ್ ಎಂದು ಗುರುತಿಸಲಾಗಿದೆ.
ಸಂಚಾರಿ ಠಾಣೆಯ ಪೊಲೀಸ್ ಸಿಬ್ಬಂದಿ ಮತ್ತು ಆತನ ಸಹೋದರ ಸೇರಿ ಚಿಕ್ಕಮ್ಮನಾದ ನನ್ನ ಮೇಲೆ ಕಳೆದ ಏಳು ವರ್ಷಗಳಿಂದ ಅತ್ಯಾಚಾರವೆಸಗಿರುವುದಲ್ಲದೆ, ಪ್ರಾಣ ಬೆದರಿಕೆ ಹಾಕಿದ್ದಾರೆ. ಇದಲ್ಲದೆ ನನ್ನ ಮಗಳಿಗೂ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
Next Story





