ಎ. 28ರಂದು ಬಜ್ಪೆಯ ‘ಫಾರ್ಚೂನ್ ಗ್ಯಾಲಕ್ಸಿ’ ವಸತಿ- ವಾಣಿಜ್ಯ ಸಂಕೀರ್ಣಕ್ಕೆ ಶಿಲಾನ್ಯಾಸ

Update: 2024-04-27 10:54 GMT

ಮಂಗಳೂರು, ಎ. 27: ಮೂಡುಬಿದಿರೆಯ ಪ್ರತಿಷ್ಠಿತ ಫಾರ್ಚೂನ್ ಪ್ರಮೋಟರ್ಸ್‌ ಬಜ್ಪೆಯಲ್ಲಿ ನಿರ್ಮಿಸಲಿರುವ ‘ಫಾರ್ಚೂನ್ ಗ್ಯಾಲಕ್ಸಿ ’ ವಸತಿ ಮತ್ತು ವಾಣಿಜ್ಯ ಸಂಕೀರ್ಣದ ಶಿಲಾನ್ಯಾಸ ಕಾರ್ಯಕ್ರಮ ಎ. 28ರಂದು ಸಂಜೆ 5.30ಕ್ಕೆ ನಡೆಯಲಿದೆ.

ಆಳ್ವಾಸ್ ಎಜುಕೇಶನ್ ಫೌಂಡೇಶನ್‌ನ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ದೀಪ ಬೆಳಗಿಸಲಿದ್ದು, ಮುಖ್ಯ ಅತಿಥಿಯಾಗಿ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಭಾಗವಹಿಸಲಿದ್ದಾರೆ.

ಶಾಸಕರಾದ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೋ, ಮೂಡಬಿದಿರೆಯ ಎಂಸಿಎಸ್ ಬ್ಯಾಂಕ್‌ನ ಸಿಇಒ ಎಂ. ಚಂದ್ರಶೇಖರ್, ಬಜ್ಪೆ ಪಂಚಾಯತ್‌ನ ಮಾಜಿ ಅಧ್ಯಕ್ಷ ಸಾಹುಲ್ ಹಮೀದ್ ಮೊದಲಾದವರು ಭಾಗವಹಿಸಲಿದ್ದಾರೆ.


ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವ್ಯಾಪ್ತಿಯ ಬಜ್ಪೆ ನಗರದಲ್ಲಿ ನಿರ್ಮಾಣವಾಗಿರುವ ಈ ಫಾರ್ಚೂನ್ ಗ್ಯಾಲಕ್ಸಿ ವಸತಿ ಸಮುಚ್ಚಯ ಎಲ್ಲ ವರ್ಗದ ಜನರಿಗೆ ಸೂಕ್ತವಾದ ವಸತಿ ಸೌಲಭ್ಯವನ್ನು ಹೊಂದಿದೆ. ನಿರ್ಮಾಣ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ 10 ವರ್ಷಗಳ ಅನುಭವ ಇರುವ ಫಾರ್ಚೂನ್ ಪ್ರಮೋಟರ್ಸ್ ಮೂಡುಬಿದಿರೆ, ಕಾರ್ಕಳ ಹಾಗು ಬಜಗೋಳಿಗಳಲ್ಲಿ ಉತ್ತಮ ಗುಣಮಟ್ಟದ ವಾಣಿಜ್ಯ ಮತ್ತು ವಸತಿ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಈಗಾಗಲೇ ಐದು ಯೋಜನೆಗಳನ್ನು ಪೂರ್ಣಗೊಳಿಸಿ ಇನ್ನೂ ಮೂರು ಯೋಜನೆಗಳು ಮಂಗಳೂರು, ಬಜ್ಪೆ ಹಾಗು ಕಾರ್ಕಳಗಳಲ್ಲಿ ಪ್ರಗತಿಯಲ್ಲಿವೆ.

ಪ್ರೀಮಿಯಂ ವಸತಿ ಮತ್ತು ವಾಣಿಜ್ಯ ಯೋಜನೆಯ ಗ್ಯಾಲಕ್ಸಿ ಸಂಕೀರ್ಣವು ಒಟ್ಟು ನಾಲ್ಕು ಮಹಡಿಗಳಲ್ಲಿ ಆಕರ್ಷಕ ವಿನ್ಯಾಸದಲ್ಲಿ 2 ಮತ್ತು 3 ಬೆಡ್‌ರೂಮ್ ಅಪಾರ್ಟ್‌ಮೆಂಟ್‌ ಗಳು, ವಾಣಿಜ್ಯ ಸ್ಥಳ, ಅತ್ಯಾಧುನಿಕ ಸೌಕರ್ಯಗಳು, ಅತ್ಯುತ್ತಮ ಫಿನಿಶಿಂಗ್ ಜೊತೆ ನಿರ್ಮಾಣವಾಗಲಿದೆ. ಫಾರ್ಚೂನ್ ಗ್ಯಾಲಕ್ಸಿಯಲ್ಲಿ ನೀಡಲಾಗುವ ವಾಣಿಜ್ಯ ಸ್ಥಳವು ಅತ್ಯಾಧುನಿಕವಾಗಿದ್ದು, ವಿಶಾಲವಾದ ಪಾರ್ಕಿಂಗ್ ಸೌಲಭ್ಯವನ್ನೂ ಹೊಂದಿದೆ.

ಫಾರ್ಚೂನ್ ಗ್ಯಾಲಕ್ಸಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅತ್ಯಂತ ಸಮೀಪದಲ್ಲಿದ್ದು , ಸುತ್ತಮುತ್ತ ವಿಶೇಷ ಶ್ರೇಣಿಯ ಶಾಪಿಂಗ್ ಮಳಿಗೆಗಳು , ರೆಸ್ಟೋರೆಂಟ್, ಶಾಲೆಗಳು, ಆರೋಗ್ಯ ಹಾಗೂ ಧಾರ್ಮಿಕ ಕೇಂದ್ರಗಳು ಮತ್ತು ಸಾಂಸ್ಕೃತಿಕ ಆಕರ್ಷಣೆಗಳಿಂದ ಕೂಡಿದೆ ಎಂದು ಫಾರ್ಚೂನ್ ಪ್ರಮೋಟರ್ಸ್‌ನ ಪಾಲುದಾರರಾದ ಅಬುಲ್ ಅಲಾ ಪುತ್ತಿಗೆ, ರೋನಿ ಫೆರ್ನಾಂಡಿಸ್, ಮಹೇಂದ್ರ ವರ್ಮಾ, ಡೆನಿಸ್ ಪಿರೇರಾ ಹಾಗು ‘ಫಾರ್ಚೂನ್ ಗ್ಯಾಲಕ್ಸಿ ’ ಯೋಜನೆಯ ಕೋ ಪ್ರಮೋಟರ್ ಹಸನ್ ಅಬ್ಬಾಸ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News