×
Ad

ಅರ್ಕುಳ: ಮುಹಮ್ಮದ್ ಶರೀಫ್ ನಿಧನ

Update: 2024-09-24 14:05 IST

ಫರಂಗಿಪೇಟೆ: ಅರ್ಕುಳ ಕೋಟೆ ನಿವಾಸಿ ಮುಹಮ್ಮದ್ ಶರೀಫ್ ಅವರು ಸೋಮವಾರ ಹೃದಯಾಘಾತದಿಂದ ನಿಧನರಾದರು.

 ಮರ್ಹೂಮ್ ಮಲಾರ್ ಅಬ್ದುಲ್ ಖಾದರ್ ಮಾಸ್ಟರ್ ಅವರ ಮಗನಾದ ಶರೀಫ್ ಅವರು  ಪ್ರೀಮಿಯರ್ ಸೌಂಡ್ಸ್ ಅಂಡ್ ಲೈಟ್ಸ್ ನ ಮಾಲಕರಾಗಿದ್ದರು.  

ಹಲವಾರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಇವರು ವಳಚ್ಚಿಲ್ ಜುಮಾ ಮಸ್ಜಿದಲ್ಲಿ ಕಾರ್ಯದರ್ಶಿಯಾಗಿ ಹಾಗೂ ರಹ್ಮಾನಿಯಾ ಜುಮಾ ಮಸ್ಜಿದ್ ಅರ್ಕುಳದ ಆಡಳಿತ ಸಮಿತಿಯಲ್ಲಿ ಹಲವಾರು ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಇವರು ಸಯ್ಯದ್ ಮದನಿ ಪದವಿಪೂರ್ವ ಕಾಲೇಜು ಅಲೇಕಳದಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿರುವ ಶಾಹುಲ್ ಹಮೀದ್ ಮಾಸ್ಟರ್ ರವರ ಕಿರಿಯ ಸಹೋದರ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News