ಮಂಗಳೂರು | ಪ್ರವಾಸೋದ್ಯಮ ಇಲಾಖೆ ಕಚೇರಿ ಸ್ಥಳಾಂತರ
Update: 2025-12-05 18:40 IST
ಮಂಗಳೂರು,ಡಿ.5: ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರ ಕಚೇರಿಯನ್ನು ಡಿ.1ರಿಂದ ನಗರದ ಪಡೀಲ್ ನಲ್ಲಿರುವ ಪ್ರಜಾ ಸೌಧದ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಗಿದೆ.
ಹಾಗಾಗಿ ಸಾರ್ವಜನಿಕರು ಯಾವುದೇ ಪತ್ರ ವ್ಯವಹಾರವನ್ನು ಉಪ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಕೊಠಡಿ ಸಂಖ್ಯೆ: 205 ಎರಡನೇ ಮಹಡಿ, ಪ್ರಜಾ ಸೌಧ, ದ.ಕ. ಜಿಲ್ಲಾ ಆಡಳಿತ ಕೇಂದ್ರ, ಪಡೀಲ್, ಮಂಗಳೂರು -575007- ಈ ವಿಳಾಸದೊಂದಿಗೆ ವ್ಯವಹರಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.