×
Ad

ದೇರಳಕಟ್ಟೆ | ಪತ್ರಿಕಾ ವಿತರಕ ಇಸ್ಮಾಯೀಲ್ ಸಹಿತ ನಾಲ್ವರಿಗೆ ಸನ್ಮಾನ

Update: 2025-12-05 18:15 IST

ದೇರಳಕಟ್ಟೆ, ಡಿ.5: ಇಲ್ಲಿನ ಟೀಮ್ ತತ್ವಮಸಿ ಮತ್ತು ತತ್ವಮಸಿ ಯಕ್ಷಗಾನ ಸಮಿತಿ ಹಾಗೂ ಊರ ನಾಗರಿಕರ ಸಹಕಾರದೊಂದಿಗೆ ನಡೆದ ಚತುರ್ಥ ವರ್ಷದ ಬೊಳ್ಮದಾಟ-2025 ಶ್ರೀ ದೇವಿಮಹಾತ್ಮೆ ಯಕ್ಷಗಾನ ಬಯಲಾಟದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಲಕ್ಷ್ಮೀಶ ಬೈಪಾಡಿತ್ತಾಯ, ನಿವೃತ್ತ ಶಿಕ್ಷಕ ರಾಜೀವ ಮುಗುಳ್ಯ, ಯಕ್ಷಗಾನ ಪ್ರೇಮಿ, ಹಿರಿಯ ಪತ್ರಿಕಾ ವಿತರಕ ಇಸ್ಮಾಯಿಲ್ ಕಾನೆಕೆರೆ, ಪಾವಂಜೆ ಮೇಳದ ಭಾಗವತ, ಶಿಕ್ಷಕ ಮುರಳಿಕೃಷ್ಣ ಶಾಸ್ತ್ರಿ ತೆಂಕಬೈಲು ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ತತ್ವಮಸಿ ಯಕ್ಷಗಾನ ಸಮಿತಿಯ ಗೌರವಾಧ್ಯಕ್ಷರಾದ ವಸಂತ ಶೆಟ್ಟಿ ಅಸೈಗೋಳಿ, ಚೇತನ್ ಶೆಟ್ಟಿ ದೇರಳಕಟ್ಟೆ, ಶರತ್‌ರಾಜ್ ಶೆಟ್ಟಿ ದೇರಳಕಟ್ಟೆ, ಅಧ್ಯಕ್ಷ ಮೋಹನ್ ದಾಸ್ ಶೆಟ್ಟಿ ಗುಡ್ಡೆಮಾರ್, ಉಪಾಧ್ಯಕ್ಷ ಸಾಕೇತ್ ನಿತ್ಯಾನಂದ ನಗರ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ದೇರಳಕಟ್ಟೆ, ಜೊತೆ ಕಾರ್ಯದರ್ಶಿ ಸುರೇಶ್ ಕುಂಪಲ, ಸಂಘಟನಾ ಕಾರ್ಯದರ್ಶಿ ಗಣೇಶ್ ಕುಕ್ಕುದಕಟ್ಟೆ, ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಜಗದೀಶ್ ರೈ ಬೆಳ್ಮ ಹೊಸಮನೆ, ಮೊಕ್ತೇಸರ ಸೀತಾರಾಮ ಶೆಟ್ಟಿ ನೆತ್ತಿಲ ಬಾಳಿಕೆ, ಬಿಜೆಪಿ ಮುಖಂಡ ರವೀಂದ್ರ ಶೆಟ್ಟಿ ಉಳಿದೊಟ್ಟು, ಪಾವಂಜೆ ಮೇಳದ ಪ್ರಧಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News