×
Ad

ಮಂಗಳೂರು ಹಜ್ ನಿರ್ವಹಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

Update: 2025-08-06 17:01 IST

ಮಂಗಳೂರು, ಆ.6:ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಮಹಾಸಭೆಯು ಇತ್ತೀಚೆಗೆ ಯೆನೆಪೋಯ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಮುಂದಿನ ಮೂರು ವರ್ಷಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಮಿತಿಯ ಅಧ್ತಕ್ಷ ಹಾಜಿ ವೈ. ಅಬ್ದುಲ್ಲಾ ಕುಂಞಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಫಝಲ್ ಹಾಜಿ ಪುತ್ತೂರು ದುಆಗೈದರು. ಉಪಾಧ್ಯಕ್ಷ ಎಸ್‌ಎಂ ರಶೀದ್ ಹಾಜಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಫೀಕ್ ಹಾಜಿ ಕೊಡಾಜೆ, ಹನೀಫ್ ಬಜ್ಪೆ, ಹಾಜಿ ಅಹ್ಮದ್ ಬಾವಾ ಪಡೀಲು, ಶರೀಫ್ ಹಾಜಿ ಬಜ್ಪೆಮತ್ತಿತರರು ಅನಿಸಿಕೆ ವ್ಯಕ್ತಪಡಿಸಿದರು.

ನೂತನ ಸಮಿತಿಯ ಅಧ್ಯಕ್ಷರಾಗಿ ಹಾಜಿ ವೈ. ಅಬ್ದುಲ್ಲಾ ಕುಂಞಿ, ಉಪಾಧ್ಯಕ್ಷರಾಗಿ ಸಿ. ಮಹ್ಮೂದ್ ಹಾಜಿ, ಎಸ್.ಎಂ. ರಶೀದ್ ಹಾಜಿ, ಇನಾಯತ್ ಅಲಿ ಮುಲ್ಕಿ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಹನೀಫ್, ಜೊತೆ ಕಾರ್ಯ ದರ್ಶಿಗಳಾಗಿ ರಫೀಕ್ ಹಾಜಿ ಕೊಡಾಜೆ, ಅಹ್ಮದ್ ಬಾವ ಹಾಜಿ ಪಡೀಲು, ಕೋಶಾಧಿಕಾರಿಯಾಗಿ ಹಾಜಿ ಬಿ.ಎಸ್. ಬಶೀರ್ ಮತ್ತು ಸದಸ್ಯರಾಗಿ ಶರೀಫ್ ಹಾಜಿ ಬಜ್ಪೆ, ಫಝಲ್ ಹಾಜಿ ಪುತ್ತೂರು, ಶಾಕೀರ್ ಹಾಜಿ ಫರಂಗಿಪೇಟೆ, ಡಾ. ಆರಿಫ್ ಮಸೂದ್, ಲತೀಫ್ ಹಾಜಿ ಬೋಳ್ಯಾರ್, ಶಫೀಕ್ ಹಾಜಿ ಕಡಬ, ಫಾರೂಕ್ ಕಿನ್ಯಾ, ಹಾಜಿ ಅಬ್ದುರಹ್ಮಾನ್ ಸುಳ್ಯ, ಅದ್ದು ಹಾಜಿ, ಹಾಜಿ ನಾಸಿರ್ ಲಕ್ಕಿಸ್ಟಾರ್, ಹನೀಫ್ ಹಾಜಿ ಗೊಳ್ತಮಜಲು, ರಿಯಾಝ್ ಬಾವಾ ಹಾಜಿ, ಹನೀಫ್ ಹಿಲ್ಟಾಪ್ ಬಜ್ಪೆ, ಹಾಜಿ ರಿಯಾಝುದ್ದೀನ್ ಬಂದರ್, ಇಬ್ರಾಹಿಂ ಕೊಣಾಜೆ, ಮುಹಮ್ಮದ್ ಅಶ್ರಫ್ ಎನ್., ಇಮ್ರಾನ್ ಅಡ್ಡೂರು, ಸಿ.ಎಚ್. ಉಳ್ಳಾಲ್, ಮುಹಮ್ಮದ್ ಹನೀಫ್ ಕಂದಕ್, ಸುಲೈಮಾನ್ ಕರಾಯ, ಇಸ್ಮಾಯಿಲ್ ನೇರಳಕಟ್ಟೆ ಆಯ್ಕೆಯಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News