ಮಂಗಳೂರು | ಗಾಂಜಾ ಸೇವನೆ: ಯುವಕ ಸೆರೆ
Update: 2025-12-05 01:17 IST
ಸಾಂದರ್ಭಿಕ ಚಿತ್ರ
ಮಂಗಳೂರು, ಡಿ.4: ನಗರದ ಕೋರ್ಟ್ ರಸ್ತೆಯಲ್ಲಿ ತೂರಾಡುತ್ತಾ ಸಾಗುತ್ತಿದ್ದ ಬೆಂಗಳೂರು ಅಂದ್ರಹಳ್ಳಿಯ 10ನೇ ಕ್ರಾಸ್ ನಿವಾಸಿ ದರ್ಶನ್ (25) ಎಂಬಾತನನ್ನು ಗಾಂಜಾ ಸೇವನೆ ಮಾಡಿದ ಆರೋಪದಡಿ ಬಂದರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಎಸ್ಸೈ ಫೈಜುನ್ನಿಸಾ ಕೋರ್ಟ್ ರಸ್ತೆಯಲ್ಲಿ ವಾಹನದಲ್ಲಿ ಸಾಗುತ್ತಿರುವಾಗ ತೂರಾಡುತ್ತಾ ಸಾಗುತ್ತಿದ್ದ ವ್ಯಕ್ತಿಯನ್ನು ನಿಲ್ಲಿಸಿ ವಿಚಾರಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ಬೆಳಕಿಗೆ ಬಂದಿದೆ. ಅದರಂತೆ ಆತನ ವಿರುದ್ಧ ಬಂದರು ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.