ಲೋಕಸಭಾ ಚುನಾವಣೆ: ಉಳ್ಳಾಲ ತಾಲೂಕಿನಲ್ಲಿ ಶಾಂತಿಯುತ ಮತದಾನ

Update: 2024-04-26 17:21 GMT

ಉಳ್ಳಾಲ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಉಳ್ಳಾಲ ತಾಲೂಕಿನ 210 ಬೂತ್ ಗಳಲ್ಲಿ ಶುಕ್ರವಾರ ಶಾಂತಿಯುತ ಮತದಾನ ನಡೆಯಿತು. ಶೇಖಡ 78 ಮತದಾನ ಆಗಿರುವುದು ವರದಿಯಾಗಿದೆ.

ಬಬ್ಬುಕಟ್ಫೆ, ಉಳ್ಳಾಲ, ದೇರಳಕಟ್ಟೆ , ತಲಪಾಡಿ ಮುಂತಾದೆಡೆ ಮುಂಜಾನೆ ಆರು ಗಂಟೆಗೆ ಮಹಿಳಾ ಮತದಾರರು ಶಾಲೆ ಬಳಿ ಸಾಲು ನಿಂತು ಆರಂಭದ ಮತ ಚಲಾಯಿಸಿದರು.

ಕಲ್ಲಾಪು ಪಟ್ಲ ಉರ್ದು ಶಾಲೆಯಲ್ಲಿ ಬಿಜೆಪಿ ಜಿಲ್ಲಾಡಳಿತ ಸೂಚನೆಯಂತೆ ನವ ನಾರೀಶಕ್ತಿಯ ಒಂಭತ್ತು ಮಂದಿ ಮಹಿಳೆ ಯರು ಪ್ರಥಮ ಹಂತದಲ್ಲೇ ಸಮವಸ್ತ್ರ ಧರಿಸಿ ಬಂದು ಮತ ಚಲಾಯಿಸಿದರು. 80 ವರ್ಷ ಪ್ರಾಯದ ಅಬೂಬಕ್ಕರ್, ಲೋಲಾಕ್ಷಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಭಾರತ್ ಸ್ಕೂಲ್ ನಲ್ಲಿ ತನ್ನ ಹಕ್ಕು ಚಲಾಯಿಸಿದರು.

ಕೆರೆಬೈಲ್ ಬೂತ್ ನಲ್ಲಿ ಅನಾರೋಗ್ಯ ದಿಂದ ಬಳಲುತ್ತಿದ್ದ ವೃದ್ಧರೊಬ್ಬರು ಉತ್ಸಾಹದಿಂದ ಮತದಾನ‌ ಕೇಂದ್ರಕ್ಕೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದರು.

ಇಂದು ಮದುವೆ ಆದ ವರ ಧೀರಜ್ ಎಂ. ಕಾಂಚನ್. ಉಲ್ಲಾಳ. ಮದುವೆ ದಿಬ್ಬಣದಿಂದ ನೇರವಾಗಿ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ.

ತಾಲೂಕಿನಲ್ಲಿ ಅತೀ ಹೆಚ್ಚು ಮತದಾರರನ್ನು ಹೊಂದಿರುವ ಅತೀ ಸೂಕ್ಷ್ಮ ಪ್ರದೇಶ ಆಗಿರುವ ಕುತ್ತಾರ್ ನಲ್ಲಿ ಮತದಾನ ಪೊಲೀಸರ ಬಿಗಿ ಭದ್ರತೆಯಲ್ಲಿ ಐದು ಮತಗಟ್ಟೆ ಗಳಲ್ಲಿ ನಡೆಯಿತು. ಮುಂಜಾನೆಯಿಂದ ಎಲ್ಲಾ ಮತಗಟ್ಟೆ ಗಳಲ್ಲಿ ಮತದಾರರು ಬಿಸಿಲಿನಲ್ಲೇ ಸರದಿ ಸಾಲಿನಲ್ಲಿ ತುಂಬಿದ್ದರು ಮುನ್ನೂರು ಗ್ರಾಮದ ಕುತ್ತಾರ್ ನಲ್ಲಿ 5345 ಮತದಾರರು ಇದ್ದಾರೆ.

ಕುತ್ತಾರ್, ಬಬ್ಬುಕಟ್ಫೆ, ಉಳ್ಳಾಲ ಕೆಲವು ಸೂಕ್ಷ್ಮ ಕ್ಷೇತ್ರಗಳಲ್ಲಿ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ.ಈ ವರೆಗೆ ಯಾವುದೇ ಅಹಿತಕರ ಘಟನೆ ಆದ ಬಗೆ ವರದಿಯಾಗಿಲ್ಲ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News