ಮಂಗಳೂರು: ಮದುವೆ ಸಂಭ್ರಮದ ಮಧ್ಯೆ ಮತದಾನ

Update: 2024-04-26 17:42 GMT

ಮಂಗಳೂರು: ಮದುವೆ ಸಂಭ್ರಮದ ಮಧ್ಯೆ ನಗರಕ್ಕೆ ಆಗಮಿಸಿದ ಮದುಮಗ ಮತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ನಗರದ ರಥಬೀದಿಯ ರಘುವೀರ್ ಕಾಮತ್-ಚೇತನಾ ಕಾಮತ್‌ರ ಪುತ್ರ ಮೋಹನ್‌ರ ವಿವಾಹವು ಉಡುಪಿಯ ಶ್ರುತಿಕಾ ಅವರೊಂದಿಗೆ ಹೋಟೆಲ್ ಕಿದಿಯೂರಿನಲ್ಲಿ ಆಯೋಜಿಸಲಾಗಿತ್ತು. ಮದುವೆ ಸಂಭ್ರಮದ ಮಧ್ಯೆಯೇ ಮದುಮಗ ಮೋಹನ್ ತನ್ನ ಹೆತ್ತವರೊಂದಿಗೆ ನಗರದ ಹಂಪನಕಟ್ಟೆಯ ಗಣಪತಿ ಹೈಸ್ಕೂಲಿನ ಬೂತ್ ನಂಬ್ರ 126ರಲ್ಲಿ ಮತ ಚಲಾಯಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News