ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು: ರೆಕ್ಟಲ್ ಕ್ಯಾನ್ಸರ್ ನಿರ್ವಹಣೆ ಪ್ರಗತಿ ಕಾರ್ಯಾಗಾರ

Update: 2024-04-29 13:24 GMT

ಮಂಗಳೂರು: ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಂಕೊಲಾಜಿ ವಿಭಾಗದ ಆಶ್ರಯದಲ್ಲಿ ಗುದನಾಳದ ಕ್ಯಾನ್ಸರ್ ನಿರ್ವಹಣೆಯಲ್ಲಿನ ಪ್ರಗತಿಯ ಬಗ್ಗೆ ಕಾರ್ಯಾಗಾರ ಶನಿವಾರ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ದಶವಾರ್ಷಿಕ ಸ್ಮಾರಕ ಸಭಾಂಗಣದಲ್ಲಿ ನಡೆಯಿತು.

ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕ ರೆ.ಫಾ. ರಿಚರ್ಡ್ ಕೊಯೆಲೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ರೋಗಿಗಳಿಗೆ ಗುಣಮಟ್ಟದ ಆರೈಕೆಯನ್ನು ಒದಗಿಸಲು ಸಂಸ್ಥೆಯ ಬದ್ಧತೆಯನ್ನು ತಿಳಿಸಿದರು.

ಯೆನೆಪೋಯ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಎಂ.ವಿಜಯ ಕುಮಾರ್, ಫಾದರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ರೆ.ಫಾ. ಅಜಿತ್ ಮೆನೇಜಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಎಫ್‌ಎಂಎಂಸಿ ರೇಡಿಯೇಷನ್ ಆಂಕೊಲಾಜಿ ವಿಭಾಗದ ಸಂಘಟನಾ ಚೇರ್ಮೆನ್ ಡಾ. ಡೊನಾಲ್ಡ್ ಜೆ ಫೆರ್ನಾಂಡಿಸ್ ವೈದ್ಯಕೀಯ ಆಂಕೊಲಾಜಿ ವಿಭಾಗದ ಎಚ್‌ಒಡಿ ಡಾ. ದಿನೇಶ್ ಶೇಟ್ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಂಘಟನಾ ಸಹ-ಅಧ್ಯಕ್ಷ ಡಾ. ರೋಹನ್ ಚಂದ್ರ ಗಟ್ಟಿ ಸ್ವಾಗತಿಸಿದರು.

ಸಂಘಟನಾ ಕಾರ್ಯದರ್ಶಿ ಹಾಗೂ ವೈದ್ಯಕೀಯ ಆಂಕೊಲಾಜಿ ವಿಭಾಗದ ಪ್ರಾಧ್ಯಾಪಕಿ ಡಾ.ನಿಶಿತಾ ಶೆಟ್ಟಿ ವಂದಿಸಿದರು. ಡಾ. ಝೈಬಾ ಮತ್ತು ಡಾ. ಲಿಯಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News