×
Ad

SJM ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ಗೆ ನೂತನ ಪದಾಧಿಕಾರಿಗಳ ಆಯ್ಕೆ

Update: 2024-05-16 16:34 IST

ಅಬೂಬಕ್ಕರ್ ಮುಸ್ಲಿಯಾರ್ ಕುಕ್ಕಾಜೆ / ಶಾಫಿ ಮದನಿ ಕರಾಯ / ಅಶ್ರಫ್ ಇಂದಾದಿ ದೇರಳಕಟ್ಟೆ

ಮಂಗಳೂರು: ಸುನ್ನೀ ಜಂಇಯತುಲ್ ಮುಅಲ್ಲಿಮೀನ್ ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ಮತ್ತು ಈಸ್ಟ್ ಇದರ ವಾರ್ಷಿಕ ಮಹಾಸಭೆಯ SJM ರಾಜ್ಯಾಧ್ಯಕ್ಷರಾದ ಮುಫತಿಷ್ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು ಉಸ್ತಾದ್‌ ಅವರ ಅಧ್ಯಕ್ಷತೆಯಲ್ಲಿ ನೂರುಲ್ ಹುದಾ ಮದ್ರಸ ಕಾರಾಜೆಯಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಅಬೂಬಕ್ಕರ್ ಮುಸ್ಲಿಯಾರ್ ಜೆಪ್ಪು, ಪ್ರಧಾನ ಕಾರ್ಯದರ್ಶಿಯಾಗಿ ಶಾಫಿ ಮದನಿ ಕೈಕಂಬ, ಕೋಶಾಧಿಕಾರಿಯಾಗಿ ಅಶ್ರಫ್ ಇಂದಾದಿ ದೇರಳಕಟ್ಟೆ ಆಯ್ಕೆಯಾದರು.

ಸಮಿತಿಯ ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಸಖಾಫಿ ಸುರತ್ಕಲ್, ಅಬ್ದುಲ್ ನಾಸೀರ್ ಮದನಿ ಕಾಟಿಪಲ್ಲ, ಝೈನುದ್ದೀನ್ ಸಅದಿ ಬಜ್ಪೆ, ಇಬ್ರಾಹಿಂ ಸಖಾಫಿ ಉಳ್ಳಾಲ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಗಳಾಗಿ ಅಶ್ರಫ್ ಸಅದಿ ಕಿನ್ನಿಗೋಳಿ, ಮುಹಮ್ಮದ್ ಸಖಾಫಿ ಸುರತ್ಕಲ್, ಅಬ್ದುಲ್ ಸತ್ತಾರ್ ಸಖಾಫಿ ಜೆಪ್ಪು, ಅಬ್ದುಲ್ ಮಜೀದ್ ಸಖಾಫಿ ಕೈಕಂಬ, ನೇಮಕಗೊಂಡರು.

ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಪಿ.ಎಂ ಮುಹಮ್ಮದ್ ಮದನಿ ತಲಪಾಡಿ, ಅಬ್ದುಲ್ ಅಝೀಝ್ ನೂರಾನಿ ದೇರಳಕಟ್ಟೆ, ಇಬ್ರಾಹಿಂ ನಈಮಿ ಕೊಣಾಜೆ, ಝಕರಿಯ್ಯ ಸಖಾಫಿ ಕಾಟಿಪಲ್ಲ, ಅಬ್ದುಲ್ ಖಾದರ್ ಸಅದಿ ಬಜ್ಪೆ, ಅಬ್ದುಲ್ಲಾ ಮದನಿ ಕಿನ್ನಿಗೋಳಿ, ಇರ್ಫಾನ್ ಫಾಲಿಲಿ ಉಳ್ಳಾಲ, ಶರೀಫ್ ಸಅದಿ ಮಂಜನಾಡಿ, ಹಸನ್ ಸಅದಿ ಮಂಜನಾಡಿ, ಅಬ್ದುಲ್ ರಹ್ಮಾನ್ ಮದನಿ ಮಂಗಳೂರು, ಹನೀಫ್ ಮುಸ್ಲಿಯಾರ್ ಮಂಗಳೂರು, ಸಾಬಿತ್ ಸಅದಿ ತಲಪಾಡಿ, ಉಬೈದುಲ್ಲಾ ಸಖಾಫಿ ಕೊಣಾಜೆ ಆಯ್ಕೆಯಾದರು.

SJM ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಕೆ ಮುಹಿಯದ್ದೀನ್ ಕಾಮಿಲ್ ಸಖಾಫಿ ಸ್ವಾಗತಿಸಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News