×
Ad

ಸೈಂಟ್ ಜೋಸೆಫ್ ವಿದ್ಯಾರ್ಥಿಗಳಿಂದ ಪ್ರತಿಭಟನೆ

Update: 2024-08-31 19:55 IST

ಮಂಗಳೂರು: ಕಲ್ಕತ್ತಾದ ವೈದ್ಯೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಹತ್ಯೆಯನ್ನು ಖಂಡಿಸಿ ನಗರದ ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಮೌನ ಪ್ರತಿಭಟನೆಯು ಇತ್ತೀಚೆಗೆ ನಡೆಯಿತು.

ಎನ್ನೆಸ್ಸೆಸ್ ಘಟಕದ ಅಧಿಕಾರಿಗಳಾದ ಮಹೇಶ್ ಡಿ.ಕೆ., ಡಾ.ಚಂದ್ನಿ ಭಂಭಾನಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಭಿತ್ತಿಪತ್ರ ಮತ್ತು ನಾಟಕ ಪ್ರದರ್ಶಿಸಿದರು.

ವಿವಿಯ ಉಪಕುಲಪತಿ ರೆ.ಡಾ. ವಿಕ್ಟರ್ ಲೋಬೋ ಎಸ್‌ಜೆ, ಶಿಫ್ಟ್ ೩ರ ನಿರ್ದೇಶಕ ರೆ.ಫ್ರಾನ್ಸಿಸ್ ಪಿಂಟೊ ಎಸ್‌ಜೆ ಮತ್ತಿತರರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News