×
Ad

ಮಂಗಳೂರು | ಕ್ರೀಡೆಯ ಮೂಲಕ ಮಾದಕ ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕೆ ಪ್ರಯತ್ನ : ಇಮ್ತಿಯಾಝ್‌ ಗೋಳ್ತಮಜಲು

ಯುಇಎ ವತಿಯಿಂದ ಕಬಡ್ಡಿ, ವಾಲಿಬಾಲ್ ಆಟಗಾರರ ಆಯ್ಕೆ ಪಂದ್ಯಾಟ

Update: 2025-12-06 19:52 IST

ಮಂಗಳೂರು : ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಶನ್ ವತಿಯಿಂದ 2026 ಜ.26 ರಿಂದ ಫೆ.1 ರ ತನಕ ವೈಟ್ ಸ್ಟೋನ್ ಪ್ರೀಮಿಯಂ ಕಮ್ಯೂನಿಟಿ ಫೆಸ್ಟ್ ಇದರ ಅಂಗವಾಗಿ ಉಳ್ಳಾಲದ ಸೀ ಗ್ರೌಂಡ್ ನಲ್ಲಿ ನಡೆಯಲಿರುವ ಅಲ್ ಮುಝೈನ್ ಯುನೈಟೆಡ್ ಕಬಡ್ಡಿ ಲೀಗ್ ಹಾಗೂ ಎಕ್ಸಪರ್ಟೀಸ್ ಯುನೈಟೆಡ್ ವಾಲಿಬಾಲ್ ಲೀಗ್ ಪಂದ್ಯಾಟದ ಪೂರ್ವಭಾವಿಯಾಗಿ ಆಟಗಾರರ ಆಯ್ಕೆ ಪ್ರಕ್ರಿಯೆಯು ನಾಟೆಕಲ್ ನ ಗ್ರಿಫ್ಫಿನ್ಸ್ ಪ್ಲೇಸ್ ನಲ್ಲಿ ಶುಕ್ರವಾರ ಸಂಜೆ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಶನ್ ರಾಜ್ಯ ಕಾರ್ಯದರ್ಶಿ ಇಮ್ತಿಯಾಜ್ ಗೋಳ್ತಮಜಲು ಮಾತನಾಡಿ, ಕ್ರೀಡೆಯ ಮೂಲಕ ಮಾದಕ ವ್ಯಸನ ಮುಕ್ತ ಸಮಾಜದ ನಿರ್ಮಾಣದ ಪ್ರಯತ್ನಕ್ಕೆ ಮುಂದಡಿ ಇಟ್ಟಿದ್ದೇವೆ. "ಪ್ರಯತ್ನ ನಮ್ಮದು, ಸಹಕಾರ ನಿಮ್ಮದು" ಈ ನಿಟ್ಟಿನಲ್ಲಿ ಕ್ರೀಡಾ ಪಟುಗಳು ಹಾಗೂ ಸಾರ್ವಜನಿಕರ ಸಹಕಾರ ಅತೀ ಅಗತ್ಯ ಎಂದ ಅವರು, ಅಸೋಸಿಯೇಷನ್ ನ ಧ್ಯೇಯೋದ್ದೇಶಗಳು ಹಾಗೂ ಮುಂದಿನ ಗುರಿಯ ಬಗ್ಗೆ ವಿವರಿಸಿದರು.

ಸಂಸ್ಥೆಯ ರಾಜ್ಯಾಧ್ಯಕ್ಷ ಸಿರಾಜ್ ಎರ್ಮಾಳ್ ಅಧ್ಯಕ್ಷತೆ ವಹಿಸಿದ್ದರು. ಡಾ. ಶಿಯಾಕ್ ಶಾಹೀದ್ ಕಾಪು, ಹುಸೈನ್ ಕೋಡಿಯಾಡಿ, ಝುಬೈರ್ ಅಹ್ಮದ್ ಕಾಪು, ಶರೀಫ್ ವಳಾಲು, ಶಫೀಕ್ ಅರಫಾ, ಯು.ಟಿ.ತೌಸೀಫ್, ಸಮೀರ್ ಲಕ್ಕಿ ಸ್ಟಾರ್, ಮುನ್ನ ಕಮ್ಮರಡಿ, ಫೈಝಲ್ ಪ್ಯೂಮಾ, ಅಫ್ತಾಬ್, ಶೌಕತ್, ಇಕ್ಬಾಲ್ ಪರ್ಲಿಯ, ಹಿರಿಯ ಕಬಡ್ಡಿ ಆಟಗಾರ ಪುತ್ತುಬಾವ (ಹಸನಬ್ಬ), ಅಂತಾರಾಷ್ಟ್ರೀಯ ಅತ್ಲೆಟಿಕ್ ಪಟು, ಅಬ್ದುರ್ರಹ್ಮಾನ್, ಹಸೈನಾರ್ ಮಾಸ್ಟರ್, ಅಬ್ದುಲ್ ರಹಿಮಾನ್ ಸಾಗರ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಜಿದ್ ಉಳ್ಳಾಲ, ಇಕ್ಬಾಲ್ ಒಕ್ಕೆತ್ತೂರು ಅತಿಥಿಗಳಾಗಿ ಭಾಗವಹಿಸಿದ್ದರು.

ಹಾಜಿ ಅಹ್ಮದ್ ಮುಸ್ತಫಾ ಗೋಳ್ತಮಜಲು, ಅಶ್ರಫ್ ಒಕ್ಕೆತ್ತೂರು, ಇರ್ಶಾದ್ ಪುತ್ತೂರು, ಹೈದರ್ ಕೈರಂಗಳ, ಅನ್ವರ್ ಬೀರಿ, ಖಲೀಲ್ ಕೈರಂಗಳ, ರಝಾಕ್ (ರಜ್ಜು) ಸುಳ್ಯ, ಕೈಝರ್ ಕನ್ನಂಗಾರ್, ಸತ್ತಾರ್ ಕೈರಂಗಳ, ಲತೀಫ್ ಪೂಂಜಾಲಕಟ್ಟೆ ವಾಲಿಬಾಲ್ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ಹಾಗೂ ಹಬೀಬ್ ಮಾಣಿ, ಆಸಿಫ್ ಪುತ್ತೂರು, ಖಲಂದರ್ ಕಡಬ, ಇಸ್ಮಾಯಿಲ್ ಕಿನ್ಯ, ಹಂಝ ಕಿನ್ಯ , ಮುನ್ನ ಕುಕ್ಕಾಜೆ ಕಬಡ್ಡಿ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಶನ್ ರಾಜ್ಯ ಸಮಿತಿ ಉಪಾಧ್ಯಕ್ಷರಾದ ನಝೀರ್ ಉಳ್ಳಾಲ, ಗಫೂರ್ ಫರಂಗಿಪೇಟೆ, ಕೋಶಾಧಿಕಾರಿ ಸಿರಾಜ್ ಪುತ್ತೂರು, ಪ್ರಮುಖರಾದ ರಮೀಝ್ ಕನ್ನಂಗಾರ್, ಶಾಕಿರ್ ಅಳಕೆಮಜಲ್, ದಾವೂದ್, ಶರೀಫ್ ಕಂಠಿ ಸುಳ್ಯ, ತಾಜುದ್ದೀನ್ ಸುಳ್ಯ, ಸಿದ್ದೀಕ್ ಉಳ್ಳಾಲ, ಇಮ್ತಿಯಾಝ್ ಉಳ್ಳಾಲ, ಸರ್ಫುದ್ದೀನ್ ಕಾಪು, ಫಯಾಝ್ ಪಟ್ಲ, ಉಬೈದ್ ವಿಟ್ಲ, ಮುಸ್ತಫಾ ಮಂಗಳೂರು ಉಪಸ್ಥಿತರಿದ್ದರು.

ಇದೇ ವೇಳೆ 8 ತಂಡಗಳ ಅಲ್ ಮುಝೈನ್ ಯುನೈಟೆಡ್ ಕಬಡ್ಡಿ ಲೀಗ್ ನ 8 ಐಕಾನ್ ಆಟಗಾರರಿಗೆ ಚೀಟಿ ಎತ್ತಲಾಗಿದ್ದು, ರಶೀದ್ ಬನಾರಿ -ವಿಟ್ಲ ತಂಡ, ಝುಫಾಫ್ ಭಟ್ಕಳ - ಯು.ಟಿ.ಫರೀದ್ ವಾರಿಯರ್ಸ್, ಮನ್ಸೂರ್ ಕಂದಲ್ - ಟೀಮ್ ಬಾವ, ಅನ್ಸಿಫ್ ವಿಟ್ಲ - ಯುನೈಟೆಡ್ ಪಡುಬಿದ್ರೆ, ಸಲ್ಮಾನ್ ಕಿನ್ಯ - ಎಲ್ಮಾಸ್ ಗ್ರೂಪ್ ಬೆಂಗಳೂರು, ಅಮ್ಮಿ ಕುಪ್ಪೆಟ್ಟಿ - ಯು.ಕೆ.ಸಿ.ಸಿ.ಕಾಪು, ಖಲಂದರ್ ಉಡುಪಿ - ಮೂಡುಬಿದಿರೆ, ಸಿಯಾಸ್ ಕೊಲ್ಲಂ - ಕಲ್ಲಡ್ಕ ತಂಡಗಳ ಪಾಲಾಗಿದ್ದಾರೆ.

ಕಬಡ್ಡಿ ಹಾಗೂ ವಾಲಿಬಾಲ್ ಪಂದ್ಯಾಟಕ್ಕೆ ತಲಾ ಎಂಟು ತಂಡಗಳನ್ನು ಮಾಲಕರು ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದೆ.

ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಷನ್ ಬಂಟ್ವಾಳ ಘಟಕಾಧ್ಯಕ್ಷ, ಪತ್ರಕರ್ತ ಲತೀಫ್ ನೇರಳಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News