×
Ad

ಪುತ್ತಿಗೆ: ಅಹ್ದಲ್ ಉರೂಸ್, ಸನದುದಾನ ಸಮಾವೇಶ

Update: 2026-02-01 21:02 IST

ಪುತ್ತಿಗೆ: ಮುಹಿಮ್ಮಾತುಲ್ ಮುಸ್ಲಿಮೀನ್ ಎಜುಕೇಶನ್ ಸೆಂಟರ್‌ನ ಸಾರಥಿ ಮತ್ತು ಆಧ್ಯಾತ್ಮಿಕ ನಾಯಕರಾಗಿದ್ದ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಅವರ ಇಪ್ಪತ್ತನೇ ಉರೂಸ್ ಮುಬಾರಕ್ ಮತ್ತು ಸನದುದಾನ ಸಮಾವೇಶವು ಸಾವಿರಾರು ಜನರಿಗೆ ಅನ್ನದಾನದೊಂದಿಗೆ ಸಮಾಪ್ತಿಗೊಂಡಿತು.

ಸಂಜೆ ಐದು ಗಂಟೆಗೆ ಆರಂಭವಾದ ಅಹ್ದಲಿಯ್ಯ ಆಧ್ಯಾತ್ಮಿಕ ಸಮಾವೇಶದಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದ ಪ್ರಮುಖರು ಭಾಗವಹಿಸಿದ್ದರು.

ಮುಹಿಮ್ಮಾತ್ ಪ್ರಧಾನ ಕಾರ್ಯದರ್ಶಿ ಬಿ. ಎಸ್. ಅಬ್ದುಲ್ಲಾ ಕುಂಞಿ ಫೈಜಿ ಅವರ ಅಧ್ಯಕ್ಷತೆಯಲ್ಲಿ ಮರ್ಕಸ್ ಡೈರೆಕ್ಟರ್ ಜನರಲ್ ಸಿ. ಮುಹಮ್ಮದ್ ಫೈಜಿ ಉದ್ಘಾಟಿಸಿದರು.

ಸಮಸ್ತ ಅಧ್ಯಕ್ಷ ರೈಸುಲ್ ಉಲಮಾ ಇ. ಸುಲೈಮಾನ್ ಮುಸ್ಲಿಯಾರ್ ಸನದುದಾನ ಪ್ರಭಾಷಣ ಮಾಡಿದರು. ಸಯ್ಯಿದ್ ಅಲಿ ಬಾಫಖಿ ತಂಙಳ್, ವಿ. ಪಿ. ಎಂ. ಫೈಜಿ ವಿಲ್ಯಪ್ಪಳ್ಳಿ, ಕೆ. ಪಿ. ಅಬೂಬಕ್ಕರ್ ಮುಸ್ಲಿಯಾರ್ ಪಟ್ಟುವಂ, ಸಯ್ಯಿದ್ ಹಸನ್ ಅಹ್ದಲ್ ತಂಙಳ್, ಸಯ್ಯಿದ್ ಸೈನುಲ್ ಆಬಿದೀನ್ ತಂಙಳ್ ಎಣ್ಮೂರು, ಮುಹಮ್ಮದ್ ಫಾಜಿಲ್ ರಜ್ವಿ ಕಾವಲ್ ಕಟ್ಟೆ, ಸಯ್ಯಿದ್ ಇಬ್ರಾಹಿಂ ಹಾದಿ ತಂಙಳ್ ಚೂರಿ, ಸಯ್ಯಿದ್ ಅಬ್ದುಲ್ ಅಸೀಸ್ ತಂಙಳ್ ಹೈದ್ರೂಸಿ, ಹಾಜಿ ಅಮೀರಲಿ ಚೂರಿ, ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ, ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ, ಹುಸೈನ್ ಸಅದಿ ಕೆ. ಸಿ. ರೋಡ್, ಕೊಲ್ಲಂಬಾಡಿ ಅಬ್ದುಲ್ ಖಾದರ್ ಸಅದಿ, ಸಯ್ಯಿದ್ ಹಬೀಬ್ ಅಹ್ದಲ್ ತಂಙಳ್, ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್, ಸಯ್ಯಿದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್, ಸಯ್ಯಿದ್ ಹುಸೈನ್ ಅಮೀನ್ ತಂಙಳ್, ಸಿ. ಕೆ. ರಾಶಿದ್ ಬುಖಾರಿ, ಸಯ್ಯಿದ್ ಖಾಸಿಂ ತಂಙಳ್ ಪಾಜೂರು, ಸಯ್ಯಿದ್ ಜುನೈದ್ ತಂಙಳ್ ಮಟ್ಟೂಲ್, ಸಯ್ಯಿದ್ ಯು. ಪಿ. ಎಸ್. ತಂಙಳ್ ಅರ್ಲಡ್ಕ, ಮೊಯ್ತು ಸಅದಿ ಚೇರೂರು, ಕಾಸಿಂ ಮದನಿ ಕರಾಯ, ಎ. ಕೆ. ಎಂ. ಅಶ್ರಫ್ ಎಂ. ಎಲ್. ಎ, ಹಂಸ ಸಖಾಫಿ ಬಂಟ್ವಾಳ, ಅಬ್ದುಸ್ಸಲಾಂ ದಾರಿಮಿ ಕುಬಣೂರು, ಇಸ್ಮಾಯಿಲ್ ಸಅದಿ ಮಳ್ಳೂರು, ಶೇಖ್ ಬಾವ ಮಂಗಳೂರು, ಕರೀಮ್ ಹಾಜಿ ಚಾಲಿಯಂ, ಅಬ್ದುರ್ರಹ್ಮಾನ್ ಅಹ್ಸನಿ, ಅಬ್ದುಲ್ ಖಾದರ್ ಸಖಾಫಿ, ಮೂಸಾ ಸಖಾಫಿ, ಅಬೂಬಕ್ಕರ್ ಕಾಮಿಲ್ ಸಖಾಫಿ, ಉಮರ್ ಸಖಾಫಿ, ಲತೀಫ್ ಸಅದಿ ಉರುಮಿ, ಸಿದ್ದೀಕ್ ಮೊಂಡುಗೋಳಿ, ರಫೀಕ್ ಸಅದಿ ದೇಲಂಪಾಡಿ, ಬಶೀರ್ ಪುಳಿಕೂರು, ಸುಲೈಮಾನ್ ಕರಿವೆಳ್ಳೂರು, ಅಬ್ದುರ್ರಜಾಕ್ ಸಖಾಫಿ ಕೊಟ್ಟಕುನ್ನು, ಅಬ್ದುಲ್ ಖಾದರ್ ಸಅದಿ ಚುಳ್ಳಿಕಾನಂ, ಸಿ. ಎನ್. ಅಬ್ದುಲ್ ಖಾದರ್ ಮಾಸ್ಟರ್, ಅಸೀಸ್ ಕಳತ್ತೂರು ಮೊದಲಾದವರು ಭಾಗವಹಿಸಿದ್ದರು. ಈ ವರ್ಷ ಮುಹಿಮ್ಮಾತ್‌ನಿಂದ ಧಾರ್ಮಿಕ ಶಿಕ್ಷಣ ಪೂರೈಸಿದ 68 ಹಿಮಮಿಗಳು ಮತ್ತು 8 ಹಾಫಿಳ್‌ಗಳು ಸನದು ಸ್ವೀಕರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News