×
Ad

ಸುರತ್ಕಲ್: ಮುಮ್ತಾಝ್ ಅಲಿ ಸ್ಮರಣಾರ್ಥ ಬಸ್ ತಂಗುದಾಣ, ಕುಡಿಯುವ ನೀರಿನ ಘಟಕ ಉದ್ಘಾಟನೆ

Update: 2026-02-01 20:57 IST

ಸುರತ್ಕಲ್: ಕರ್ನಾಟಕ ಮುಸ್ಲಿಂ ಜಮಾಅತ್ ಎಸ್.ವೈ.ಎಸ್. ಎಸ್ಸೆಸ್ಸೆಫ್ 7ನೇ‌ ಬ್ಲಾಕ್ ಯುನಿಟ್ ಹಾಗೂ ಬದ್ರಿಯಾ ದಫ್ ಕಮೀಟಿ ಕೃಷ್ಣಾಪುರ ಇದರ ವತಿಯಿಂದ ಮರ್ಹೂಂ ಹಾಜಿ ಬಿ.ಎಂ. ಮುಮ್ತಾಝ್ ಅಲಿ ಅವರ ಸ್ಮರಣಾರ್ಥ ಕೃಷ್ಣಾಪುರ ಕುಕ್ಕಾಡಿಯ ಬದ್ರಿಯಾ ಬಸ್ ತಂಗುದಾಣದಲ್ಲಿ ನಿರ್ಮಾಣಗಿಗೊಂಡ ನೂತನ ಶುದ್ಧ ಕುಡಿಯುವ ನೀರಿನ ಘಟಕವು ರವಿವಾರ ಉದ್ಘಾಟನೆಗೊಂಡಿತು.

ಕಾರ್ಯಕ್ರಮವನ್ನು ಕೇಂದ್ರ ಬದ್ರಿಯಾ ಜುಮಾ ಮಸ್ಜಿದ್ ಖತೀಬರಾದ ಉಮರುಲ್ ಫಾರೂಖ್ ಸಖಾಫಿ ಅಲ್ ಹಿಕಮಿ ಉದ್ಘಾಟಿಸಿದರು.

ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ಮಾಜಿ ಶಾಸಕ ಬಿ.ಎ ಮೊಯ್ದೀನ್ ಬಾವಾ ಅವರು ಉದ್ಘಾಟಿಸಿದರು. ಬದ್ರಿಯಾ ದಫ್ ಕಮೀಟಿಯ ಗೌರವಾಧ್ಯಕ್ಷ ಬಿ. ಮುಹಮ್ಮದ್ ಅಲಿ, ಕೇಂದ್ರ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಝಾಕೀರ್ ಹುಸೈನ್, ಮಾಜಿ ಪ್ರ.ಕಾರ್ಯದರ್ಶಿ ಎಂ.ಎಸ್. ಶರೀಫ್, ಎಸ್.ವೈ.ಎಸ್ ದ.ಕ ಜಿಲ್ಲಾ ಸದಸ್ಯ ಅಬ್ದುರ್ರಹ್ಮಾನ್ ಹಾಜಿ ಪ್ರಿಂಟೆಕ್, ಎಸ್ಸೆಸ್ಸೆಫ್ ಕೃಷ್ಣಾಪುರ ಸೆಕ್ಟರ್ ಅಧ್ಯಕ್ಷ ಅನೀಸ್ ಮರ್ಝೂಕಿ, ಎಸ್ ವೈಎಸ್ ಕೃಷ್ಣಾಪುರ ಸರ್ಕಲ್ ಅಧ್ಯಕ್ಷ ಇರ್ಫಾನ್ ನೂರಾನಿ, ಕರ್ನಾಟಕ ಮುಸ್ಲಿಂ ಜಮಾಅತ್ ಕೃಷ್ಣಾಪುರ ಸರ್ಕಲ್ ಅಧ್ಯಕ್ಷ ಮನ್ಸೂರ್ ರೈಹಾನ್, ಲುಕ್ಮಾನಿಯ ಉಸ್ತಾದ್ ಉಪಸ್ಥಿತರಿದ್ದರು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News