×
Ad

ಉಳ್ಳಾಲ ಉರೂಸ್ ಪೂರ್ವ ಸಿದ್ಧತಾ ಸಭೆ

Update: 2024-12-02 14:43 IST

ಉಳ್ಳಾಲ : ಖುತ್'ಬುಝ್ಝಮಾನ್ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ) ಉಳ್ಳಾಲ ದರ್ಗಾ ಉರೂಸ್ ಪೂರ್ವ ಸಿದ್ಧತಾ ಕಾರ್ಯ ಕ್ರಮಗಳ ಬಗ್ಗೆ ಚರ್ಚಿಸಲು ಖಾಝಿ ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ.ಉಸ್ತಾದರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ವಿಧಾನಸಭಾ ಅಧ್ಯಕ್ಷ ಯು.ಟಿ.ಕಾದರ್ ಸಮ್ಮುಖದಲ್ಲಿ ಉಳ್ಳಾಲ ದರ್ಗಾ ಪದಾಧಿಕಾರಿಗಳು ಜಾಮಿಅ ಮರ್ಕಝುಸ್ಸಖಾಪತಿಸ್ಸುನ್ನಿಯ್ಯ ದೀವಾನೆ ಖಾಝಿ ಹಾಲ್ ನಲ್ಲಿ ಸಭೆ ‌ ನಡೆಯಿತು

ಉರೂಸ್ ಗೆ ಸರ್ಕಾರದಿಂದ ದೊರೆಯಬೇಕಾದ ಅನುದಾನವನ್ನು ಬಿಡುಗಡೆ, ಉಳ್ಳಾಲ ಕೇಂದ್ರ ಜುಮಾ ಮಸ್ಜಿದನ್ನು ಗ್ರ್ಯಾಂಡ್ ಮಸ್ಜಿದ್ ಆಗಿ ಪರಿವರ್ತಿಸುವುದು, ಉಳ್ಳಾಲ ನಗರ ಸಭೆಯಿಂದ ದರ್ಗಾ ಕ್ಯಾಂಪಸ್ ಅಭಿವೃದ್ಧಿ ಯೋಜನೆ ಮತ್ತು ಉರೂಸ್ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳ ಮತ್ತು ಎಲ್ಲಾ ಸಚಿವರುಗಳ ಭಾಗವಹಿಸುವಿಕೆ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ಹಾಜಿ , ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ, ಜೊತೆ ಕಾರ್ಯದರ್ಶಿಗಳಾದ ಮುಹಮ್ಮದ್ ಇಸ್ಹಾಖ್, ಮುಸ್ತಫಾ, ಮತ್ತು ಕೋಶಾಧಿಕಾರಿ ನಾಝಿಂ ರಹ್ಮಾನ್ ಉಪಸ್ಥಿತರಿದ್ದರು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News