×
Ad

ನೇರ ನೇಮಕಾತಿಯಲ್ಲಿ ಒಬಿಸಿಗೆ 27 ಶೇ. ಮೀಸಲಾತಿ: ಲೋಕಸಭೆಗೆ ಮಾಹಿತಿ

Update: 2026-03-10 22:42 IST

Photo Credit: PTI

ಹೊಸದಿಲ್ಲಿ: ಕೇಂದ್ರ ಸರಕಾರದ ಅಡಿಯಲ್ಲಿ ಬರುವ ಸಿವಿಲ್ ಹುದ್ದೆಗಳು ಮತ್ತು ಸೇವೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳುವಾಗ ಸರಕಾರವು ಇತರ ಹಿಂದುಳಿದ ವರ್ಗ (ಒಬಿಸಿ)ಗಳಿಗೆ 27 ಶೇಕಡ ಮೀಸಲಾತಿ ನೀಡುವುದು ಎಂದು ಲೋಕಸಭೆಗೆ ಮಂಗಳವಾರ ತಿಳಿಸಲಾಯಿತು.

ಮೀಸಲಾತಿ ನೀತಿಯನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಜಾರಿಗೊಳಿಸುತ್ತಿದೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಹಾಯಕ ಸಚಿವ ಬಿ.ಎಲ್. ವರ್ಮಾ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.

‘‘ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ 8-9-1993ರ ಕಚೇರಿ ತಿಳುವಳಿಕೆ ಪತ್ರ ಮತ್ತು ಕಾಲ ಕಾಲಕ್ಕೆ ಹೊರಡಿಸಲಾಗಿರುವ ಇತರ ಸೂಚನೆಗಳ ಆಧಾರದಲ್ಲಿ ಸರಕಾರವು ಮೀಸಲಾತಿ ನೀತಿಯೊಂದನ್ನು ಹೊಂದಿದೆ. ಇದರ ಪ್ರಕಾರ, ಸರಕಾರದ ಅಡಿಯಲ್ಲಿ ಬರುವ ಸಿವಿಲ್ ಹುದ್ದೆಗಳು ಮತ್ತು ಸೇವೆಗಳಿಗೆ ಸರಕಾರ ಮಾಡುವ ನೇರ ನೇಮಕಾತಿಗಳಲ್ಲಿ 27 ಶೇಕಡ ಹುದ್ದೆಗಳನ್ನು ಇತರ ಹಿಂದುಳಿದ ವರ್ಗಗಳಿಗೆ ಮೀಸಲಿಡಲಾಗುತ್ತದೆ’’ ಎಂದು ಸಚಿವರ ತನ್ನ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News