ಮುಷ್ಕರ ರದ್ದತಿಯ ಬಳಿಕವೂ ಏರ್ ಇಂಡಿಯನ್ ಎಕ್ಸ್‌ಪ್ರೆಸ್‌ ನ 75 ವಿಮಾನಗಳ ಹಾರಾಟ ರದ್ದು

Update: 2024-05-10 16:34 GMT

ಏರ್ ಇಂಡಿಯಾ ಎಕ್ಸ್ಪ್ರೆಸ್ | PC : PTI 

ಹೊಸದಿಲ್ಲಿ : ತನ್ನ ಕ್ಯಾಬಿನ್ ಸಿಬ್ಬಂದಿಯ ಒಂದು ವರ್ಗ ಮುಷ್ಕರವನ್ನು ಗುರುವಾರ ಹಿಂತೆಗೆದುಕೊಂಡಿದ್ದರೂ, ಶುಕ್ರವಾರ ಸಾಕಷ್ಟು ಕ್ಯಾಬಿನ್ ಸಿಬ್ಬಂದಿ ಕೊರತೆಯ ಕಾರಣದಿಂದಾಗಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಸುಮಾರು 75 ವಿಮಾನಗಳ ಹಾರಾಟವನ್ನು ರದ್ದುಪಡಿಸಿತು ಹಾಗೂ ವಿಮಾನದ ಕಾರ್ಯನಿರ್ವಹಣೆಗಳು ರವಿವಾರದೊಳಗೆ ಸಹಜಸ್ಥಿತಿಗೆ ಬರುವ ನಿರೀಕ್ಷೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕ್ಯಾಬಿನ್ ಸಿಬ್ಬಂದಿ ಮುಷ್ಕರದಿಂದಾಗಿ ಏರ್ಇಂಡಿಯಾ ಎಕ್ಸ್ಪ್ರೆಸ್ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವುಂಟಾಗಿತ್ತು.ಮುಷ್ಕರದ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟ ರದ್ದತಿ ಹಾಗೂ ಪ್ರಯಾಣಿಕರಿಗೆ ಪರಿಹಾರಧನ ಪಾವತಿಗಾಗಿ ಸುಮಾರು 30 ಕೋಟಿ ರೂ. ನಷ್ಟವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಂಗಳವಾರ ರಾತ್ರಿಯಿಂದ ಏರ್ಇಂಡಿಯಾ ಎಕ್ಸ್ಪ್ರೆಸ್ನ ಕ್ಯಾಬಿನ್ ಸಿಬ್ಬಂದಿಯ ಒಂದು ವರ್ಗವು ಮುಷ್ಕರಕ್ಕಿಳಿದ ಹಿನ್ನೆಲೆಯಲ್ಲಿ 170ಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದುಗೊಂಡಿತ್ತು. ಗುರುವಾರ ಸಂಜೆ ಮುಷ್ಕರವನ್ನು ಹಿಂದೆಗೆದುಕೊಳ್ಳಲಾಗಿತ್ತು ಹಾಗೂ 25 ಮಂದಿ ಮುಷ್ಕರ ನಿರತ ಸಿಬ್ಬಂದಿಯನ್ನು ವಜಾಗೊಳಿಸಿ ನೀಡಲಾದ ಆದೇಶ ಪತ್ರಗಳನ್ನು ಆಡಳಿತ ಮಂಡಳಿ ಹಿಂದೆಗೆದುಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News