ಎಐ-ಚಾಲಿತ ಸರ್ವೇಕ್ಷಣೆ, ಇತರ ಯೋಜನೆಗಳಿಗೆ ಐಐಟಿ ಭುಬನೇಶ್ವರ ಜೊತೆಗೆ DRDO ಸಹಯೋಗ

Update: 2024-05-08 06:07 GMT

Representational Image (Photo: pixabay.com)

ಭುಬನೇಶ್ವರ್: ಎಐ ಚಾಲಿತ ಸರ್ವೇಕ್ಷಣೆ ಮತ್ತು ಇತರ ಯೋಜನೆಗಳಿಗಾಗಿ ಐಐಟಿ ಭುಬನೇಶ್ವರ ಜೊತೆಗೆ ಡಿಫೆನ್ಸ್‌ ರಿಸರ್ಚ್‌ ಎಂಡ್‌ ಡೆವಲೆಪ್ಮೆಂಟ್‌ ಆರ್ಗನೈಸೇಶನ್‌ (DRDO) ಸಹಯೋಗ ಮಾಡಲಿದೆ.

ಈ ಕುರಿತಂತೆ ಡಿಆರ್‌ಡಿಒ ಮತ್ತು ಐಐಟಿ ಭುಬನೇಶ್ವರ ಅಧಿಕಾರಿಗಳ ಜೊತೆ ಮಂಗಳವಾರ ಸಭೆ ನಡೆದಿದೆ. ಡಿಆರ್‌ಡಿಒ ಮಹಾನಿರ್ದೇಶಕ (ಎಲೆಕ್ಟ್ರಾನಿಕ್ಸ್‌ ಎಂಡ್‌ ಕಮ್ಯುನಿಕೇಶನ್‌ ಸಿಸ್ಟಮ್ಸ್) ಮತ್ತು ಹಲವು ಹಿರಿಯ ವಿಜ್ಞಾನಿಗಳು ಭಾಗವಹಿಸಿದ್ದರು.

ಡಿಆರ್‌ಡಿಓ ಇದರ ಇಸಿಎಸ್‌ ಕ್ಲಸ್ಟರ್‌ನ ಒಂಭತ್ತು ಅನುಮೋದಿತ ಯೋಜನೆಗಳನ್ನು ಐಐಟಿ ಭುಬನೇಶ್ವರಕ್ಕೆ ಹಸ್ತಾಂತರಿಸಲಾಗಿದ್ದರೆ ಇನ್ನೂ ಏಳು ಯೋಜನೆಗಳು ಮಂಜೂರುಗೊಳಿಸುವ ಹಂತದಲ್ಲಿವೆ. ಇವುಗಳ ಒಟ್ಟು ವೆಚ್ಚ ರೂ 18 ಕೋಟಿ ಎಂದು ಅಂದಾಜಿಸಲಾಗಿದೆ.

ಎಲೆಕ್ಟ್ರಾನಿಕ್ಸ್‌ ಯುದ್ಧ, ಎಐ ಚಾಲಿತ ಸರ್ವೇಕ್ಷಣೆ, ಪವರ್‌ ಸಿಸ್ಟಂಗಳು ಮತ್ತು ರಾಡಾರ್‌ ಸಿಸ್ಟಂಗಳು ಇತ್ಯಾದಿ ಕ್ಷೇತ್ರಗಳಲ್ಲಿ ಈ ಯೋಜನೆ ಪ್ರಯೋಜನಕಾರಿಯಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News