×
Ad

ಬಿಹಾರ | ಮೋದಿಗೆ ಮತ ನೀಡಬೇಡಿ ಎಂದ ಸರಕಾರಿ ಶಿಕ್ಷಕ ಬಂಧನ

Update: 2024-05-19 22:30 IST

ಹೊಸದಿಲ್ಲಿ : ‘ಯಾರೂ ಕೂಡಾ ಮೋದಿಗೆ ಮತ ಹಾಕಕೂಡದು’ ಎಂದು ತನ್ನ ತರಗತಿಯಲ್ಲಿ ಮಕ್ಕಳೊಂದಿಗೆ ಹೇಳಿದ್ದರೆನ್ನಲಾದ ಬಿಹಾರದ ಸರಕಾರಿ ಶಾಲೆಯೊಂದರ ಅಧ್ಯಾಪಕ ಹರೇಂದ್ರ ರಜಕ್ ರನ್ನು ರವಿವಾರ ಬಂಧಿಸಲಾಗಿದೆ. ಹರೇಂದ್ರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವು ವಿದ್ಯಾರ್ಥಿಗಳ ಕುಟುಂಬ ಸದಸ್ಯರು ಶಿಕ್ಷಕನ ವಿರುದ್ಧ ಲಿಖಿತ ದೂರು ನೀಡಿದ್ದರು.

ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ಹರೇಂದ್ರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆಯೆಂದು ಮುಝಫರಪುರ ಎಸ್.ಎಸ್.ಪಿ. ರಾಕೇಶ್ ಕುಮಾರ್ ತಿಳಿಸಿದ್ದಾರೆ.

ಉಚಿತ ಪಡಿತರ ಯೋಜನೆಯಡಿ ವಿತರಣೆಯಾಗುತ್ತಿರುವ ಆಹಾರಧಾನ್ಯಗಳು ಸೇವನೆಗೆ ಅಯೋಗ್ಯವಾಗಿದ್ದು, ಯಾರೂ ಕೂಡಾ ಮೋದಿಗೆ ಮತ ನೀಡಬಾರದೆಂದು ಕುರ್ಹಾನಿ ಬ್ಲಾಕ್ನ ಅಮರಖ್ ಸರಕಾರಿ ಶಾಲೆಯ ಶಿಕ್ಷಕ ಹರೇಂದ್ರ ರಜಕ್ ತರಗತಿಗಳಲ್ಲಿ ಹೇಳುತ್ತಿದ್ದರೆಂದು ವಿದ್ಯಾರ್ಥಿಗಳ ಪೋಷಕರು ಕುಟುಂಬ ಸದಸ್ಯರಿಗೆ ಸಲ್ಲಿಸಿದ ಲಿಖಿತ ದೂರಿನಲ್ಲಿ ತಿಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News