10 ವರ್ಷಗಳ ಬಿಜೆಪಿ ಆಡಳಿತ ಬಳಿಕವೂ ಹಿಂದೂಗಳು ಅಪಾಯದಲ್ಲಿದ್ದರೆ, ಅದು ಅಧಿಕಾರಕ್ಕೆ ಮರಳಬಾರದು: ಕೀರ್ತಿ ಆಝಾದ್

Update: 2024-05-01 09:21 GMT

ಕೀರ್ತಿ ಆಝಾದ್ | PC : PTI 

ಕೊಲ್ಕತ್ತಾ: ಭಾರತದ ಮಾಜಿ ಕ್ರಿಕೆಟಿಗ ಮತ್ತು ಟಿಎಂಸಿ ಅಭ್ಯರ್ಥಿ ಕೀರ್ತಿ ಆಝಾದ್ ಅವರು ಬುಧವಾರ ಬಿಜೆಪಿಯ ಹಿಂದೂ ರಾಷ್ಟ್ರೀಯವಾದದ ಬಗ್ಗೆ ಖಾರವಾಗಿ ಮಾತನಾಡಿದ್ದಾರೆ. ಕೇಸರಿ ಪಕ್ಷ ಹತ್ತು ವರ್ಷಗಳ ಕಾಲ ಆಡಳಿತದಲ್ಲಿದ್ದರೂ, ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಹೇಳುತ್ತಲೇ ಬರುತ್ತಿದೆ. ಇದು ಆ ಪಕ್ಷ ಮತ್ತೆ ಅಧಿಕಾರಕ್ಕೆ ಮರಳುವ ಅಗತ್ಯತೆಗಳ ಬಗ್ಗೆ ಸಂದೇಹ ಮೂಡಲು ಕಾರಣವಾಗಿದೆ" ಎಂದು ಆಝಾದ್ ವಿಶ್ಲೇಷಿಸಿದರು.

ಪಶ್ಚಿಮ ಬಂಗಾಳದ ಬರ್ಧಮಾನ್-ದುರ್ಗಾಪುರ ಲೋಕಸಭಾ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಅವರು, ಸಮಾನ ನಾಗರಿಕ ಸಂಹಿತೆ (ಯುಸಿಸಿ) ವಿವಾದ, ಮತದಾನವನ್ನು ಕೋಮು ವಿಷಯವಾಗಿಸುವ ಪಿತೂರಿ ಎಂದು ಬಣ್ಣಿಸಿದರು. ಏಕೆಂದರೆ ಜನಸಮೂಹದ ಮುಂದೆ ಪ್ರಸ್ತುತಪಡಿಸಲು ಬಿಜೆಪಿಗೆ ಪ್ರಭಾವಿ ವರದಿಯ ಚಿತ್ರಣ ಇಲ್ಲ ಎಂದು ಛೇಡಿಸಿದರು.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹಿಂದೂ ವೈವಿಧ್ಯತೆ ಬಗ್ಗೆ ಮಾತನಾಡಿದ ಅವರು, ಯುಸಿಸಿ ಜಾರಿಗೊಳಿಸುವ ಕಾರ್ಯಸಾಧ್ಯತೆಯ ವಿರುದ್ಧ ವಾದ ಮಂಡಿಸಿದರು. ಈ ಹಿಂದಿನ ಆಡಳಿತದ ಅವಧಿಯಲ್ಲಿ ಅಭದ್ರತೆ ಹಿಂದೂಗಳನ್ನು ಕಾಡುತ್ತಿತ್ತು ಎಂಬ ಬಿಜೆಪಿ ಪ್ರತಿಪಾದನೆಯನ್ನು ಇತಿಹಾಸ ಸುಳ್ಳು ಎಂದು ತೋರಿಸಿದೆ ಎಂಬುದಾಗಿ ಬಣ್ಣಿಸಿದರು.

"ಮೊಘಲರ ಅವಧಿಯಲ್ಲಿ ಹಿಂದೂಗಳಿಗೆ ಅಪಾಯ ಇರಲಿಲ್ಲ; ಬ್ರಿಟಿಷ್ ಆಡಳಿತದಲ್ಲೂ ಇಂಥ ಭಯ ಇರಲಿಲ್ಲ. ಸ್ವಾತಂತ್ರ್ಯಾನಂತರ ಅಧಿಕಾರಕ್ಕೆ ಬಂದ ಸರ್ಕಾರಗಳ ಅವಧಿಯಲ್ಲೂ ಹೀಗೆ ಆಗಿರಲಿಲ್ಲ. ಹಿಂದೂಗಳಿಗೆ ಎಂದೂ ಅಪಾಯ ಪರಿಸ್ಥಿತಿ ಎದುರಾಗಲಿಲ್ಲ. ಹಿಂದೂ ರಾಷ್ಟ್ರೀಯವಾದಿ ಪಕ್ಷ 10 ವರ್ಷದಿಂದ ಅಧಿಕಾರದಲ್ಲಿರುವಾಗ ದಿಢೀರನೇ ಹಿಂದೂಗಳಿಗೆ ಅಪಾಯ ಬಂದದ್ದು ಎಲ್ಲಿಂದ ಎಂದು ಛೇಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News