×
Ad

ತಾಯಿಯ ನಿರ್ವಹಣಾ ವೆಚ್ಚ ಪಾವತಿಸುವಂತೆ ಮಹಿಳೆಗೆ ಸೂಚಿಸಿದ ಮಧ್ಯ ಪ್ರದೇಶ ನ್ಯಾಯಾಲಯ

Update: 2024-05-21 20:17 IST

ಸಾಂದರ್ಭಿಕ ಚಿತ್ರ

 

ಇಂದೋರ್: ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ತಾನು ಮನೆಯಿಂದ ಹೊರ ಹಾಕಿದ್ದ ತನ್ನ 78 ವರ್ಷದ ತಾಯಿಗೆ ಮಾಸಿಕ ರೂ. 3,000 ನಿರ್ವಹಣಾ ವೆಚ್ಚವನ್ನು ಪಾವತಿಸುವಂತೆ ಮಹಿಳೆಯೊಬ್ಬರಿಗೆ ಮಧ್ಯಪ್ರದೇಶದ ಇಂದೋರ್ ನ ನ್ಯಾಯಾಲಯವೊಂದು ಆದೇಶಿಸಿದೆ.

ತನ್ನ 55 ವರ್ಷದ ಪುತ್ರಿಯ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ಇಳಿ ವಯಸ್ಸಿನ ತಾಯಿಯು, ನನ್ನ ಎಲ್ಲ ಉಳಿತಾಯವನ್ನು ಕಸಿದುಕೊಂಡ ನಂತರ, ಲಾಕ್ ಡೌನ್ ಸಂದರ್ಭದಲ್ಲಿ ನನ್ನ ಪುತ್ರಿಯು ನನಗೆ ಕಿರುಕುಳ ನೀಡಿದ್ದಳು ಎಂದು ಆರೋಪಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಹೆಚ್ಚುವರಿ ಪ್ರಧಾನ ನ್ಯಾಯಾಧೀಶೆ ಮಾಯಾ ವಿಶ್ವಲಾಲ್, ಮೇ 17ರಂದು ಈ ಆದೇಶ ಹೊರಡಿಸಿದ್ದಾರೆ.

“ಅರ್ಜಿದಾರರು ಸಲ್ಲಿಸಿರುವ ಸಾಕ್ಷ್ಯಾಧಾರಗಳ ಪ್ರಕಾರ, ಪ್ರತಿವಾದಿಯಾದ ಪುತ್ರಿಯು ತನ್ನ ಪುತ್ರನೊಂದಿಗೆ ತನ್ನ ನಿವಾಸದಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದದ್ದು ರುಜುವಾತಾಗಿದೆ. ಇದರಿಂದ ಆಕೆ ಆದಾಯ ಗಳಿಸುತ್ತಿದ್ದಾಳೆ ಹಾಗೂ ತನ್ನ ತಾಯಿಯನ್ನು ನಿರ್ವಹಿಸಲು ಸಮರ್ಥಳಾಗಿದ್ದಾಳೆ ಎಂಬುದು ಸ್ಪಷ್ಟವಾಗಿದೆ” ಎಂದು ಅರ್ಜಿ ವಿಚಾರಣೆ ನಡೆಸಿದ ನ್ಯಾ. ಮಾಯಾ ವಿಶ್ವಲಾಲ್ ಅಭಿಪ್ರಾಯ ಪಟ್ಟರು.

ತನ್ನ ಪುತ್ರಿಯ ತನ್ನ ನಿವಾಸದಲ್ಲಿ ಸೀರೆ ವ್ಯಾಪಾರವನ್ನು ನಡೆಸುತ್ತಿದ್ದು, ಮಾಸಿಕ ರೂ. 20,000-ರೂ. 22,000 ಆದಾಯ ಗಳಿಸುತ್ತಿದ್ದಾಳೆ ಎಂದು ಅರ್ಜಿದಾರ ತಾಯಿಯು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News