×
Ad

ಸಿಂಧೂರ್ ಹಾಕಿದ ನಿಮ್ಮ ಪತ್ನಿಯ ಹಕ್ಕನ್ನು ಕಸಿದುಕೊಂಡಿದ್ದೀರಿ: ಪ್ರಧಾನಿ ಮೋದಿ ವಿರುದ್ಧ ಸ್ವಾಮಿ ಅವಿಮುಕ್ತೇಶ್ವರಾನಂದ ವಾಗ್ದಾಳಿ

Update: 2025-06-21 16:03 IST

ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ (Photo credit: ANI)

ಹೊಸದಿಲ್ಲಿ: ಸಿಂಧೂರ್' ಹಾಕಿದ ಪತ್ನಿಗೆ ಏನು ಮಾಡಿದ್ರಿ ? ನಿಮ್ಮ ಪತ್ನಿ ಪ್ರಧಾನಿ ನಿವಾಸದಲ್ಲಿ ಯಾಕಿಲ್ಲ? ನೀವು ನಿಮ್ಮ ಪತ್ನಿಯ ಹಕ್ಕನ್ನು ಕಸಿದುಕೊಂಡಿದ್ದೀರಿ ಎಂದು ಪ್ರಧಾನಿ ವಿರುದ್ಧ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಸ್ವಾಮಿ ಅವಿಮುಕ್ತೇಶ್ವರಾನಂದ, ನಾವು ಸಂಬಂಧಗಳನ್ನು ಬೆಳೆಸುವಾಗ ಅವುಗಳ ಪರೀಕ್ಷೆ ನಿರ್ಣಾಯಕ ಸಮಯದಲ್ಲಿ ನಡೆಯುತ್ತದೆ. ನಾವು ಯಾರೊಂದಿಗೆ ಸಂಬಂಧ ಬೆಳೆಸಿದ್ದೇವೋ, ಅವರು ಕಠಿಣ ಸಮಯದಲ್ಲಿ ನಮ್ಮೊಂದಿಗೆ ನಿಂತಿರಬೇಕಿತ್ತು. ಆದರೆ ಅವರು ನಮ್ಮೊಂದಿಗಿರಲಿಲ್ಲ. ಮೋದಿಜಿ ಅವರು ಇದರ ಬಗ್ಗೆ ಜನರಿಗೆ ಬಹಳ ಭರವಸೆ ನೀಡಿದ್ದರು ಎಂದು ಶಂಕರಾಚಾರ್ಯ ಹೇಳಿದ್ದಾರೆ.

ಅವರು ಮೊದಲ ಬಾರಿಗೆ ಪ್ರಧಾನಮಂತ್ರಿಯಾದಾಗ, ಭಾರತದ ನೆರೆಯ ಎಲ್ಲಾ ದೇಶಗಳನ್ನು ಬಹಳ ಗೌರವದಿಂದ ಪ್ರತಿಯೊಬ್ಬರನ್ನು ಕರೆದು, ಎಲ್ಲರೊಂದಿಗೆ ಸಭೆ ನಡೆಸಿದ್ದರು. ಭಾರತ ಈಗ ತನ್ನ ನೆರೆಯವರೊಂದಿಗೆ ಸೇರಿ ದೊಡ್ಡ ಶಕ್ತಿಯಾಗಬಹುದು ಎಂದು ಭಾವಿಸಲಾಗಿತ್ತು. ಆದರೆ, 11 ವರ್ಷದ ನಂತರವೂ, ನಾವು ಒಂಟಿಯಾಗಿ ನಿಂತಲ್ಲೇ ನಿಂತಿದ್ದೇವೆ ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಲ್ದೀವ್ಸ್ ನಂತಹ ದೇಶ, ಅದು ಕೇವಲ ಹೆಸರಿಗೆ ಮಾತ್ರ ಬೇರೆ ದೇಶವಾಗಿತ್ತು; ಅದು ಭಾರತದೊಂದಿಗೆ ಒಂದೇ ದೇಶ ಎಂಬಂತೆ ಕಾಣುತ್ತಿತ್ತು. ಈಗ ಮಾಲ್ದೀವ್ಸ್ ನಂತಹ ದೇಶವೇ ನಮಗೆ ಸವಾಲು ಹಾಕಲು ಪ್ರಾರಂಭಿಸಿದೆ. ಇದಕ್ಕಿಂತ ಹೆಚ್ಚು ಏನು ಹೇಳಬೇಕು? ಎಂದು ಅವರು ಪ್ರಶ್ನಿಸಿದ್ದಾರೆ.

'ಆಪರೇಷನ್ ಸಿಂಧೂರ್'ನ ಯಶಸ್ಸಿನ 'ಡೋಲು' ಎಲ್ಲರೂ ಬಾರಿಸಿದ್ದರು. ನೋಡಿ, 'ಡೋಲು' ಅದು ಸ್ವತಃ ಬಾರಿಸಲಾಗುವುದಿಲ್ಲ. ಡೋಲಿನ ನಿಯಮ ಎಂದರೆ, ಅದನ್ನು ಇತರರು ಹೊಡೆಯುತ್ತಾರೆ. ನಾವು ನಮ್ಮ ಬಗ್ಗೆ ಸ್ವತಃ ಹೇಳಿಕೊಂಡರೆ, “ನಾನು ಪರಾಕ್ರಮಿ, ನಾನು ಪ್ರತಾಪಿ, ನಾನು ವೀರ, ನಾನು ಬಲವಂತ, ನಾನು ವಿದ್ವಾಂಸ, ನಾನು ಉತ್ತಮ” ಎಂದು ಹೇಳಿಕೊಂಡರೆ ಅದು ತಮಾಷೆಯ ವಿಷಯವಾಗುತ್ತದೆ. ಅಮೆರಿಕದ ರಾಷ್ಟ್ರಪತಿ ಪತ್ರಿಕಾಗೋಷ್ಠಿಯಲ್ಲಿ ನಿಮ್ಮ ಕುರಿತು ನಗುತ್ತಿದ್ದಾರೆ. ಡೋಲು ಎಲ್ಲಿ ಬಾರಿಸಲಾಗುತ್ತಿದೆ? ಯಾರು ನಿಮ್ಮನ್ನು ಪ್ರಶಂಸೆ ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.

ವಿರೋಧ ಪಕ್ಷದವರು ವಿದೇಶಕ್ಕೆ ಹೋದರೆ ಏನು ಮಾಡುತ್ತಾರೆ? ದೇಶದ ಪ್ರತಿಯೊಬ್ಬನೂ ವಿದೇಶಕ್ಕೆ ಹೋದಾಗ ನಮ್ಮ ವೈಫಲ್ಯವನ್ನು ಮುಚ್ಚಿಡಲು ಇಷ್ಟಪಡುತ್ತಾನೆ, ಅಲ್ಲವೇ? ಅದು ಸರಿ, ಅದರಲ್ಲಿ ತಪ್ಪೇನಿಲ್ಲ. ಪಕ್ಷವಾಗಲಿ, ವಿರೋಧ ಪಕ್ಷವಾಗಲಿ, ವಿದೇಶಕ್ಕೆ ಹೋದ ಮೇಲೆ ನಾವು ನಮ್ಮ ಸರಕಾರದ ಬಗ್ಗೆ ಅನ್ಯತೆ ತೋರಿಸುವುದಿಲ್ಲ. ಆದರೆ, ನಿಜವಾದ ಸತ್ಯ ಏನು? ನಾವು ನೋಡಬೇಕು. ಸತ್ಯವೆಂದರೆ, ವಿದೇಶಾಂಗ ನೀತಿಯಲ್ಲಿ ಬಹಳ ದೊಡ್ಡ ದೌರ್ಬಲ್ಯವಿದೆ ಎಂದು ಅವರು ಹೇಳಿದರು.

'ಆಪರೇಷನ್ ಸಿಂಧೂರ್' ಯಶಸ್ವಿಯಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸ್ವಾಮಿ ಅವಿಮುಕ್ತೇಶ್ವರಾನಂದ, 'ಸಿಂಧೂರ್' ಎಂಬ ಪದವೇ ಇಂದು ಅಳುತ್ತಿದೆ. ಭಾರತದಲ್ಲಿ ನನ್ನ ಗೌರವ ಏನಿತ್ತು? ಸಿಂಧೂರ್‌ನ ಗೌರವ ಏನಿತ್ತು?´ ಒಂದು ಡಬ್ಬಿ ಬಹಳ ದೊಡ್ಡ ಅರ್ಥ ಹೇಳುತ್ತಿತ್ತು. ಭಾರತದಲ್ಲಿ 'ಸಿಂಧೂರ್' ಎಂದರೆ ಬಹಳ ದೊಡ್ಡ ವಿಷಯ. ಒಂದು ಚಿಟಿಕೆ ಸಿಂಧೂರ್‌ಗೆ ದೊಡ್ಡ ಮಹತ್ವ ಇದೆ. ಇಂದು ಸಿಂಧೂರ್‌ನ ಸ್ಥಿತಿ ಏನು? ಸಿಂಧೂರ್ ಬಗ್ಗೆ ಮಾತಾಡುವವರು ಸಿಂಧೂರ್‌ನ ಮಾನ ಕಾಪಾಡಿದ್ದಾರೆಯೇ? ಎಂದು ಪ್ರಶ್ನಿಸಿದರು.

ನೀವು ಸಿಂಧೂರ್ ಕುರಿತು ಮಾತಾಡುತ್ತೀರಿ, ನೀವು ಸಿಂಧೂರ್ ಹಾಕಿದವರೊಂದಿಗೆ ಹೇಗೆ ವರ್ತಿಸಿದ್ದೀರಿ? ಹೇಳಿ. ನಿಮ್ಮ ಕರ್ತವ್ಯ ಅಲ್ಲವೇ? ನೀವು ನಿಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ 'ಆಕೆ ನನ್ನ ಪತ್ನಿ' ಎಂದು ಬರೆದಿದ್ದೀರಿ. ಆಗ ಪತ್ನಿಯ ಗೌರವವನ್ನು ಆಕೆಯಿಂದ ಹೇಗೆ ಕಸಿದುಕೊಳ್ಳಬಹುದು? ಅವಳು ಪ್ರಧಾನಮಂತ್ರಿ ನಿವಾಸದಲ್ಲಿ ಇರಬೇಕಿತ್ತು, ಆಕೆಗೆ ಆ ಹಕ್ಕು ಇದೆ. ನೀವು ಆಕೆಯ ಹಕ್ಕನ್ನು ಏಕೆ ಕಸಿದುಕೊಂಡಿದ್ದೀರಿ? ಎಂದು ಪ್ರಶ್ನಿಸಿದರು.

ನೀವು ಮಾತಾಡಲಿಲ್ಲ, ನಿಮಗೆ ಸರಿ ಇರಲಿಲ್ಲ. ಆದರೆ, ಆಕೆ ನಿಮ್ಮ ಕಾನೂನುಬದ್ಧ ಪತ್ನಿ. ಆಗ ಪ್ರಧಾನಮಂತ್ರಿಯ ಪತ್ನಿ ಎಂಬ ಗೌರವ ಆಕೆಗೆ ಬರಬೇಕಿತ್ತು. ಆಕೆ ಅದರಿಂದ ವಂಚಿತಳಾಗಿದ್ದಾಳೆ. ನೀವು ಆಕೆಯನ್ನು ಒಂಟಿಯಾಗಿ ಬಿಟ್ಟಿದ್ದೀರಿ. ಈಗ ಮುರಾರಿ ಬಾಪು ಬಂದಿದ್ದಾರೆ. ಅವರು ಮಾನಸ್ ಸಿಂಧೂರ್ ಕಥೆ ಹೇಳುತ್ತಿದ್ದಾರೆ. ಸಿಂಧೂರ್ ಪದವನ್ನು ಉಪಯೋಗಿಸುತ್ತಿದ್ದರು. ಅವರು ಮೂರು ದಿನದ ಹಿಂದೆ ನಿಧನರಾಗಿದ್ದಾರೆ. ಕನಿಷ್ಠ 10 ದಿನ ಸಿಂಧೂರ್ ನ ಮಾನ ಕಾಪಾಡಬೇಕಿತ್ತು. ಸಿಂಧೂರ್‌ನ ಮಾನ ಕಾಪಾಡದವರು ಸಿಂಧೂರ್‌ನ ಬಗ್ಗೆ ಮಾತಾಡುತ್ತಿದ್ದಾರೆ. ಇದರಿಂದ, 'ಸಿಂಧೂರ್' ಪದವು ಈಗ ನನ್ನೊಂದಿಗೆ ಏನು ಆಗುತ್ತಿದೆ? ನಾನು ಏನಾಗಿದ್ದೆ ಮತ್ತು ಏನು ಆಗುತ್ತಿದ್ದೇನೆ?' ಎಂದು ದುಃಖಿಸುತ್ತಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News