ಇಸ್ರೋದಿಂದ ಐದನೇ ಮಾರ್ಗದರ್ಶಿ ಉಪಗ್ರಹದ ಯಶಸ್ವಿ ಉಡಾವಣೆ

Update: 2016-01-20 18:19 GMT

ಶ್ರೀಹರಿಕೋಟಾ(ಆಂ.ಪ್ರ),ಜ.20: ಭಾರತವು ಬುಧವಾರ ದೇಶಿ ನಿರ್ಮಿತ ಪಿಎಸ್‌ಎಲ್‌ವಿ ರಾಕೆಟ್ ಬಳಸಿ ತನ್ನ ಐದನೇ ಮಾರ್ಗದರ್ಶಿ ಉಪಗ್ರಹ ಐಆರ್‌ಎನ್‌ಎಸ್‌ಎಸ್-1ಇ ಅನ್ನು ಕಕ್ಷೆಗೆ ಸೇರಿಸುವಲ್ಲಿ ಪರಿಪೂರ್ಣ ಯಶಸ್ಸು ಸಾದಿಸಿದೆ.
   ಈ ವರ್ಷದಲ್ಲಿ ಪ್ರಥಮವಾದ ತನ್ನ ಈ ಯಶಸ್ವಿ ಉಡಾವಣೆಯ ಮೂಲಕ ಭಾರತವು ತಮ್ಮ ಸ್ವಂತ ಉಪಗ್ರಹ ಮಾರ್ಗದರ್ಶಿ ವ್ಯವಸ್ಥೆಗಳನ್ನು ಹೊಂದಿರುವ ರಾಷ್ಟ್ರಗಳ ಆಯ್ದ ಗುಂಪಿಗೆ ಸೇರಲು ಇನ್ನು ಕೆಲವೇ ಹೆಜ್ಜೆಗಳಷ್ಟು ದೂರವಿದೆ. ಭಾರತೀಯ ಪ್ರಾದೇಶಿಕ ಮಾರ್ಗದರ್ಶಿ ಉಪಗ್ರಹ ವ್ಯವಸ್ಥೆ(ಐಆರ್‌ಎನ್‌ಎಸ್‌ಎಸ್)ಯು ಏಳು ಉಪಗ್ರಹಗಳನ್ನು ಹೊಂದಿದ್ದು, ಈ ಪೈಕಿ ಐಆರ್‌ಎನ್‌ಎಸ್‌ಎಸ್-1ಎ, ಐಆರ್‌ಎನ್‌ಎಸ್‌ಎಸ್-1ಬಿ,ಐಆರ್‌ಎನ್‌ಎಸ್‌ಎಸ್-1ಸಿ,ಐಆರ್‌ಎನ್‌ಎಸ್‌ಎಸ್-1ಡಿ ಮತ್ತು ಐಆರ್‌ಎನ್‌ಎಸ್‌ಎಸ್-1ಇ ಈವರೆಗೆ ಕಕ್ಷೆಯನ್ನು ಸೇರಿಕೊಂಡಿವೆ.
 ಬುಧವಾರ ಬೆಳಿಗ್ಗೆ ಸರಿಯಾಗಿ 9:31ಕ್ಕೆ ಕಿತ್ತಳೆ ಬಣ್ಣದ ಜ್ವಾಲೆಗಳನ್ನು ಚಿಮ್ಮಿಸುತ್ತ ನಭಕ್ಕೇರಿದ 44.4 ಮೀ.ಉದ್ದ ಹಾಗೂ 330ಟನ್ ತೂಕದ ಪಿಎಸ್‌ಎಲ್‌ವಿ ರಾಕೆಟ್ ಇಸ್ರೋ ಅಕಾರಿಗಳು ಮತ್ತು ಪತ್ರಕರ್ತರ ಹರ್ಷೋದ್ಗಾರಗಳ ನಡುವೆಯೇ ಕ್ಷಣಕ್ಷಣಕ್ಕೂ ತನ್ನ ವೇಗವನ್ನು ಹೆಚ್ಚಿಸಿಕೊಳ್ಳುತ್ತ ಮುನ್ನುಗ್ಗಿತು ಮತ್ತು ಸರಿಯಾಗಿ 19 ನಿಮಿಷಗಳ ಬಳಿಕ ಐಆರ್‌ಎನ್‌ಎಸ್‌ಎಸ್-1ಇಯನ್ನು ಕಕ್ಷೆಯಲ್ಲಿ ಸೇರಿಸಿತು. ತಕ್ಷಣವೇ ಉಪಗ್ರಹದ ಸೌರಲಕಗಳು ತೆರೆದುಕೊಂಡಿದ್ದು, ಅದನ್ನು ನಿಯಂತ್ರಿಸುತ್ತಿರುವ ಕರ್ನಾಟಕದ ಹಾಸನದಲ್ಲಿರುವ ಮಿಷನ್ ಕಂಟ್ರೋಲ್ ೆಸಿಲಿಟಿ(ಎಂಸಿಎ್) ಅದರಲ್ಲಿಯ ಮೋಟಾರುಗಳನ್ನು ಉರಿಸುವ ಮೂಲಕ ನಿಗದಿತ ಕಕ್ಷೆಗೆ ಸೇರಿಸಲಿದೆ.
ಇನ್ನುಳಿದ ಎರಡು ಉಪಗ್ರಹಗಳನ್ನು ಶೀಘ್ರವೇ ಉಡಾವಣೆಗೊಳಿಸುವುದಾಗಿ ಇಸ್ರೋದ ಅಕಾರಿಯೋರ್ವರು ತಿಳಿಸಿದರು.
ಐಆರ್‌ಎನ್‌ಎಸ್‌ಎಸ್‌ನ ಪ್ರತಿಯೊಂದೂ ಉಪಗ್ರಹ ಸುಮಾರು 150 ಕೋ.ರೂ.ವೆಚ್ಚದ್ದಾಗಿದ್ದು, ಪಿಎಸ್‌ಎಲ್‌ವಿ ಆವೃತ್ತಿಗೆ 130 ಕೋ.ರೂ.ವೆಚ್ಚವಾಗುತ್ತಿದೆ. ಏಳು ರಾಕೆಟ್‌ಗಳ ಒಟ್ಟೂ ನಿರ್ಮಾಣ ವೆಚ್ಚ ಸುಮಾರು 910 ಕೋ.ರೂ.ಗಳಾಗಿವೆ.
ವಿಶ್ವದಲ್ಲಿಯ ಇಂತಹುದೇ ವ್ಯವಸ್ಥೆಗಳು 20ಕ್ಕೂ ಅಕ ಉಪಗ್ರಹಗಳನ್ನು ಹೊಂದಿದ್ದರೆ, ಕೇವಲ ಏಳು ಉಪಗ್ರಹಗಳನ್ನು ಹೊಂದಿರುವ ಐಆರ್‌ಎನ್‌ಎಸ್‌ಎಸ್ ವಿಶಿಷ್ಟವಾಗಿದೆ ಎಂದು ಇಸ್ರೋ ಅಕಾರಿಗಳು ತಿಳಿಸಿದರು.
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News