×
Ad

ಶಿವಸೇನಾ ನಾಯಕಿಯನ್ನು ಕರೆದೊಯ್ಯಲು ಹೊರಟಿದ್ದ ಹೆಲಿಕಾಪ್ಟರ್ ಪತನ

Update: 2024-05-03 14:19 IST

Photo: X/@lokmat

ರಾಯಗಢ: ಶಿವಸೇನಾ ಉಪ ನಾಯಕಿ ಸುಷ್ಮಾ ಅಂಧಾರೆ ಅವರನ್ನು ಕರೆದೊಯ್ಯಲು ಹೊರಟಿದ್ದ ಖಾಸಗಿ ಹೆಲಿಕಾಪ್ಟರ್ ಒಂದು ಶುಕ್ರವಾರ ಭೂಸ್ಪರ್ಶ ಮಾಡುವ ಸಂದರ್ಭದಲ್ಲಿ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಧಾರೆ ಹಂಚಿಕೊಂಡಿರುವ ನೇರ ಪ್ರಸಾರದ ವಿಡಿಯೊ ಚಿತ್ರೀಕರಣದ ದೃಶ್ಯಾವಳಿ ಪ್ರಕಾರ, ಅಪರಿಚಿತ ಸ್ಥಳವೊಂದರಲ್ಲಿ ಭೂಸ್ಪರ್ಶ ಮಾಡಲು ಯತ್ನಿಸುತ್ತಿದ್ದ ಹೆಲಿಕಾಪ್ಟರ್, ದಿಢೀರನೆ ತನ್ನ ನಿಯಂತ್ರಣ ಕಳೆದುಕೊಂಡು, ಭಾರಿ ಸದ್ದಿನೊಂದಿಗೆ ನೆಲಕ್ಕೆ ಅಪ್ಪಳಿಸಿರುವುದು ಸೆರೆಯಾಗಿದೆ.

ಆದರೆ, ಅಪಘಾತಕ್ಕೀಡಾದ ಹೆಲಿಕಾಪ್ಟರ್‌ನಿಂದ ಹೊರಗೆ ಜಿಗಿಯುವಲ್ಲಿ ಪೈಲಟ್ ಯಶಸ್ವಿಯಾಗಿದ್ದರೂ, ಬಿಳಿ ಮತ್ತು ನೀಲಿ ಬಣ್ಣದ ಹೆಲಿಕಾಪ್ಟರ್ ರಾಯಗಢದ ಮಹಾದ್ ಪಟ್ಟಣದ ಬಳಿ ಸಂಭವಿಸಿರುವ ಅಪಘಾತದಲ್ಲಿ ತೀವ್ರ ಹಾನಿಗೀಡಾಗಿದೆ.

ಘಟನೆಯ ಕುರಿತು ತನಿಖೆ ನಡೆಸಲು ಪೊಲೀಸರು ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಘಟನೆಯಿಂದ ಗಾಬರಿಗೊಳಗಾದಂತೆ ಕಂಡು ಬಂದ ಅಂಧಾರೆ, ಜಿಲ್ಲೆಯ ವಿವಿಧ ಭಾಗಗಳಲ್ಲಿ ಆಯೋಜನೆಗೊಂಡಿದ್ದ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಲು ರಸ್ತೆ ಮಾರ್ಗವಾಗಿ ಕಾರಿನ ಮೂಲಕ ತೆರಳಿದರು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News